ಅವರು ಬಂದು ಮಾತನಾಡಿದ ಬಳಿಕ ಎಲ್ಲವೂ ಸರಿ ಹೋಗುತ್ತೆ- ಸಚಿವ ಆನಂದ್ ಸಿಂಗ್ ಅಸಮಾಧಾನ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ.

ಬೆಂಗಳೂರು,ಆಗಸ್ಟ್,11,2021(www.justkannada.in): ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ಬಳಿಕ ತಮಗೆ ಸಿಕ್ಕಿದ ಖಾತೆ ಬಗ್ಗೆ  ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆಯೆ ಎಂಬ ಪ್ರಶ್ನೆ ಮೂಡಿದ್ದು, ಇದಕ್ಕೆ ಪುಷ್ಠೀಕರಣ ನೀಡುವ ಹಾಗೆ ಹಲವು ವಿದ್ಯಾಮಾನಗಳು ನಡೆದಿವೆ. ನಿನ್ನೆ ಶಾಸಕರ ಭವನದಿಂದ ಅವರು ತಮ್ಮ ಕಾರ್ಯಾಲಯ ತೆರವುಗೊಳಿಸಿದ್ದಾರೆ, ಅಲ್ಲಿ ಅವರ ನಾಮಫಲಕವು ಮಾಯವಾಗಿದೆ.

ಇನ್ನು ಸಚಿವ ಆನಂದ್ ಸಿಂಗ್ ಅವರು ಹೊಸಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಭಾಗಿಯಾಗಿದ್ದಾರೆ.  ಇನ್ನು ಕೆಲವೇ ಹೊತ್ತಿನಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಜಧಾನಿಗೆ ಬಂದ ಮೇಲೆ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದಾರೆಯೇ ಎಂಬ ಕುತೂಹಲ ಉಂಟಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಆನಂದ್ ಸಿಂಗ್ ಎಲ್ಲಾ ವಿಚಾರವನ್ನು ನನಗೆ ಹೇಳಿದ್ದಾರೆ. ನಾನು ಕೂಡ ಅವರಿಗೆ ಹಲವು ವಿಚಾರಗಳನ್ನ ಹೇಳಿದ್ದೇನೆ.   ಆನಂದ್ ಸಿಂಗ್ ಕರೆಸಿ ಮಾತನಾಡುತ್ತೇನೆ. ಸಚಿವ ಆನಂದ್ ಸಿಂಗ್ ಗೆ ಭೇಟಿಯಾಗಲು ಹೇಳಿದ್ದೇನೆ. ಅವರು ಬಂದು ಮಾತನಾಡಿದ ಬಳಿಕ ಅಂತಿಮವಾಗಿ ಎಲ್ಲವೂ ಸರಿ ಹೋಗುತ್ತೆ. ಅವರು ಬಂದು ಮಾತನಾಡಿದ ಬಳಿಕ ಎಲ್ಲವೂ ಸರಿ ಹೋಗುತ್ತೆ ಎಂದು ತಿಳಿಸಿದ್ದಾರೆ.

ಸಚಿವ ಆನಂದ್ ಸಿಂಗ್ ಅವರು ಆರಂಭದಲ್ಲಿ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಸಚಿವ ಖಾತಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಅವರಿಗೆ ಸಿಕ್ಕಿದ್ದು ಪ್ರವಾಸೋದ್ಯಮ, ಪರಿಸರ ಮತ್ತು ಅರಣ್ಯ ಖಾತೆ. ತಮಗೆ ಸಿಕ್ಕಿದ ಖಾತೆ ಬಗ್ಗೆ ಬಹಿರಂಗವಾಗಿಯೇ ಆನಂದ್ ಸಿಂಗ್ ಅಸಮಾಧಾನ ತೋಡಿಕೊಂಡಿದ್ದರು, ಅಲ್ಲದೆ ಇನ್ನು ಕೆಲವು ದಿನಗಳಲ್ಲಿಯೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳಿದ್ದರು.

ENGLISH SUMMARY….

Everything will be alright after he comes and talk: CM Bommai on Minister Anand Singh’s displeasure
Bengaluru, August 11, 2021 (www.justkannada.in): Minister Anand Singh who has expressed his displeasure on the distribution of portfolios appears to have decided to resign from his post as per several new developments. He has vacated his office from the Legislature House and also his nameplate has disappeared.
It is learned that Anand Singh along with his family members is engaged in renovation works of the Venugopalaswamy temple in Hospet. However, it is said that he will arrive in Bengaluru today by afternoon. His move has led to curiosity among the party members and the public about his next move.
In the meantime, Chief Minister Basavaraj Bommai informed that Anand Singh has already spoken to him and they have exchanged their views and opinions. “I have informed him to meet me and I will speak to him. Everything will be alright after I meet him,” the Chief Minister informed.
Keywords: Chief Minister/ Basavaraj Bommai/ Minister Anand Singh/ Displeasure

Key words: CM –Bommai- responds – Minister- Anand Singh’s- displeasure.