ಮೈಸೂರು, ಆ.13, 2021 : (www.justkannada.in news) ಬಿಜೆಪಿ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಭೂ ಅಕ್ರಮವೆಸಗಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮೈಸೂರಿನಲ್ಲಿಂದು ಸುದ್ಧಿಗೋಷ್ಠಿ ನಡೆಸಿ ಹೇಳಿದಿಷ್ಟು…
ಕಾಂಗ್ರೆಸ್ ಬಗ್ಗೆ ಸಚಿವ ಈಶ್ವರಪ್ಪ ಅವಾಚ್ಯಶಬ್ದ ಬಳಕೆ ವಿಚಾರ. ಈಶ್ವರಪ್ಪ ಬಿಜೆಪಿ ಮೇಲಿರುವ ಕೋಪವನ್ನ ಕಾಂಗ್ರೆಸ್ ಮೇಲೆ ತೋರುತ್ತಿದ್ದಾರೆ. ಇವರಿಗೇನಾದ್ರೂ ಸಂಸ್ಕೃತಿ, ಕಾಮನ್ಸೆಸ್ಸ್ ಇದೆಯಾ.? ಈಶ್ವರಪ್ಪಗೆ ಮಾನ ಮರ್ಯಾದೆ ಇದೆಯಾ ಎಂಬುದನ್ನ ಮೊದಲು ತಿಳಿಸಿ. ನಿಮ್ಮ ಮಗ ಕಾಂತೇಶ್ ಬೆಂಗಳೂರಿನ ಪೀಣ್ಯ ಇಂಡಸ್ಟ್ರೀಯಲ್ ನಲ್ಲಿ ಸೈಟ್ ಖರೀದಿಸಿದ್ದಾರೆ. 4 ಇಂಡಸ್ಟ್ರಿಯಲ್ ಸೈಟು ಖರೀದಿಸಿದ್ದೀರಿ, ಅದರಲ್ಲಿ ಏನು ಮಾಡ್ತಿದ್ದೀರಿ..? ಒಬ್ಬರಿಗೆ ನಾಲ್ಕು ಸೈಟ್ ಹೇಗೆ ನೀಡ್ತಾರೆ.? ಇದರ ಒಟ್ಟು ಬೆಲೆ ಎಷ್ಟು..? ಇಡಿ, ಐಟಿ ಯಾಕೆ ಇವರ ಬಗ್ಗೆ ತನಿಖೆ ಮಾಡ್ತಿಲ್ಲ. ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರಾ ರೈಡ್ ಮಾಡೋದಾ..!? ಈ ಬಗ್ಗೆ ನನ್ನ ಬಳಿ ಸಂಪೂರ್ಣ ದಾಖಲಾತಿ ಇದೆ.
ಸಚಿವ ಕೆ.ಎಸ್. ಈಶ್ವರಪ್ಪ ಸರ್ಕಾರದ ವ್ಯವಸ್ಥೆ ದುರುಪಯೋಗ ಮಾಡಿಕೊಂಡಿದ್ದಾರೆ. ನಿಮ್ಮ ಮಗ ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಇಡಿ ಹಾಗೂ ಐಟಿಗೆ ದೂರು ನೀಡುತ್ತಿದ್ದೇವೆ. ಯಾವರೀತಿ ತನಿಖೆ ಮಾಡ್ತಾರೋ ನೋಡ್ತಿವಿ. ಈಶ್ವರಪ್ಪ ಮೊದಲು ಹುಚ್ಚರ ರೀತಿ ಮಾತಮಾಡೊದನ್ನ ಬಿಡಲಿ. ಈಶ್ವರಪ್ಪ ಮೀರ್ ಸಾದಿಕ್ ಕೆಲಸ ಮಾಡ್ತಿದ್ದಾರೆ. ಜನರ ದಿಕ್ಕುತಪ್ಪಿಸಲು ಈ ರೀತಿ ಹೇಳಿಕೆ ನೀಡ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ವಿರುದ್ಧ ಎಂ.ಲಕ್ಷ್ಮಣ್ ಕಿಡಿ.
ಬಿಜೆಪಿ ಡಬಲ್ ಸ್ಟ್ಯಾಂಡರ್ಡ್.
2019ರಲ್ಲಿ ಕುಣಿಗಲ್ ಅತ್ರ ಕಡಿದು ಕಾರು ಚಲಾಯಿಸಿದ್ದ. ಇಬ್ಬ ವ್ಯಕ್ತಿಯನ್ನ ಕೊಂದು ಹೋಗಿ ಮದ್ರಾಸ್ ನಲ್ಲಿ ಅವಿತುಕೊಂಡಿದ್ದ. ಇವನು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಾನೆ. ಸಿ.ಟಿ.ರವಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ. ಸಿ.ಟಿ.ರವಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಲಕ್ಷ್ಮಣ್.
ಕೇಂದ್ರ ಬಿಜೆಪಿ ಮೇಕೆದಾಟು ಯೋಜನೆಯಲ್ಲಿ ನಮಗೆ ಮೋಸ ಮಾಡ್ತಿದೆ. ನಾವು ಮೊದಲು ಭಾರತೀಯರು ನಂತರ ಕನ್ನಡಿಗರು ಅಂತ ಸಿ.ಟಿ.ರವಿ ಹೇಳ್ತಿದ್ದಾನೆ. ಸಿ.ಟಿ.ರವಿಗೆ ನಾಚಿಕೆಯಾಗಬೇಕು. ಮೇಕೆದಾಟು ವಿಚಾರದಲ್ಲಿ ಬಿಜೆಪಿ ಡಬಲ್ ಸ್ಟ್ಯಾಂಡರ್ಡ್. ಇದರಲ್ಲಿ ನಿಮ್ಮ ನಿಲುವೇನು ಎಂಬುದನ್ನ ತಿಳಿಸಿ. ಇದರಲ್ಲಿ ಬೇಕು ಅಂತಲೇ ಬಿಜೆಪಿ ರಾಜಕೀಯ ಮಾಡ್ತಿದೆ. ತಮಿಳುನಾಡಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ.
ಬೆಂಗಳೂರಿನಲ್ಲಿ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿಸಿದ್ದು ಬಿಜೆಪಿಯವ್ರೆ..! ಬೆಂಗಳೂರಿನಲ್ಲಿ ಬೆಡ್ ಲಾಕ್ ಧಂಧೆ ಮಾಡ್ತಿದ್ದವನು ಸತೀಶ್ ರೆಡ್ಡಿ. ಅದನ್ನ ಬಿಜೆಪಿಯವ್ರೆ ಬಯಲು ಮಾಡಿ ನಾಟಕವಾಡ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಬೆಂಕಿ ಹಚ್ಚಿದು ಯಾರು ಅಂತ ಪೊಲೀಸರು ಬಹಿರಂಗ ಪಡಿಸಲಿ. ಸುದ್ದಿಗೋಷ್ಠಿಯಲ್ಲಿ ಎಂ.ಲಕ್ಷ್ಮಣ್ ಆಗ್ರಹ.
key words : mysore-congress-m.lakshman-press meet-bjp