ಮೈಸೂರು, ಆ.14, 2021 : (www.justkannada.in news) ನಗರದಲ್ಲಿ ಗುಂಪು ವಸತಿ ಯೋಜನೆ ಜಾರಿಗೆ ತರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆಗೆ ಸರಕಾರದ ಹಸಿರು ನಿಶಾನೆ. ಪ್ರಾಧಿಕಾರದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಈ ಸಂಬಂಧ ಮೈಸೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದಿಷ್ಟು…
ಯೋಜನೆ ಜಾರಿ ಸಂಬಂಧ ಈಗಾಗಲೇ ತಾಂತ್ರಿಕ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದೇವೆ. 2020-21ನೇ ಸಾಲಿನಲ್ಲಿ 1 BHKಯ 1008 ಮನೆಗಳು ಹಾಗೂ 2 BHK ಯ 952 ಗುಂಪು ಮನೆಗಳ ನಿರ್ಮಾಣ. ಒಟ್ಟು 452 ಕೋಟಿ ವೆಚ್ಚದಲ್ಲಿ ಗುಂಪು ಮನೆ ನಿರ್ಮಾಣಕ್ಕೆ ಅನುಮೋದನೆ.
ವಿಜಯನಗರ 4ನೇ ಹಂತ, ದಟ್ಟಗಳ್ಳಿ 1ನೇ ಹಂತ ಮತ್ತು ಸಾತಗಳ್ಳಿ ಬಿ ವಲಯದ ಅಂಬೇಡ್ಕರ್ ನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ.
ಯೋಜನೆಯಲ್ಲಿ 1BHK ಮನೆಗೆ 14.83ಲಕ್ಷ ಹಾಗೂ 2BHK ಮನೆಗೆ 29.94 ಲಕ್ಷದಿಂದ 33.80ಲಕ್ಷದ ವರೆಗೆ ಅಂದಾಜು ನಿಗಧಿಪಡಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ರೀತಿಯಲ್ಲಿ ಮನೆಗಳ ಹಂಚಿಕೆ. ಗುಂಪು ಮನೆ ಯೋಜನೆಯನ್ನು ಅನುಷ್ಠಾನಗೊಳಿಸಲು ವೈಜ್ಞಾನಿಕ ಬೇಡಿಕೆ ಸಮೀಕ್ಷೆ. ಆನ್ಲೈನ್ ಹಾಗೂ ಆಫ್ ಲೈನ್ ಮೂಲಕ ಬೇಡಿಕೆ ಸಮೀಕ್ಷೆಗೆ ಸಿದ್ದತೆ. ಗುಣಮಟ್ಟದ ವಸ್ತುಗಳನ್ನು ಬಳಸಿ ಗುಂಪುಮನೆ ನಿರ್ಮಾಣಕ್ಕೆ ಒತ್ತು.
ಎಲ್ಲಾ ಬಡವಣೆಗಳಿಗೂ ಕುಡಿಯುವ ನೀರು :
ಮೈಸೂರಿನ ಎಲ್ಲಾ ಬಡಾವಣೆಗಳಿಗೂ ಕುಡಿಯುವ ನೀರು ಸರಬರಾಜು ಮಾಡುವ ಬಗ್ಗೆ ಸಚಿವ ಭೈರತಿ ಬಸವರಾಜು ಮೈಸೂರಿಗೆ ಆಗಮಿಸಿದ ವೇಳೆ ಚರ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿದರಗೂಡು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದೇವೆ. 188 ಎಂ.ಎಲ್.ಡಿ ನೀರು ಸರಬರಾಜಿಗೆ ಕ್ರಮ ವಹಿಸುವ ಬಗ್ಗೆ ಬಗ್ಗೆ ಚರ್ಚೆ ನಡೆಸಲಾಗಿದೆ. ಮೈಸೂರು ಸಮಗ್ರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಗುರಿ ಇದೆ. ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಹೇಳಿಕೆ.
ಮೈಸೂರಿಗೆ ಮೆಟ್ರೋ ಲೈಟ್/ನಿಯೋ :
ಮೈಸೂರು ನಗರ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದಾಗಿದೆ. ಮುಂದಿನ 30 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಯೋಜನೆ. ಮೈಸೂರು ನಗರಕ್ಕೆ ಮೆಟ್ರೋ ಲೈಟ್ ತರುವ ಸಂಬಂಧ ಕಾರ್ಯ ಸಾಧ್ಯತಾ ವರದಿ ತಯಾರಿಸಲು ಮುಡಾದಿಂದ ಅನುಮೋದನೆ ನೀಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಮತ್ತು ಮುಡಾದ ಜಂಟಿ ಸಹಭಾಗಿತ್ವದಲ್ಲಿ ಸದರಿ ಯೋಜನೆ ಸಿದ್ದತೆ. ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ. ಈ ಯೋಜನೆಗಾಗಿ ಕೇಂದ್ರ 18,000 ಕೋಟಿಗೂ ಹೆಚ್ಚು ಅನುದಾನವನ್ನು ಕಾಯ್ದಿರಿಸಿದೆ.
ಮೈಸೂರು ನಗರಕ್ಕೂ ಮೆಟ್ರೋ ಲೈಟ್\ನಿಯೋ ಯೋಜನೆಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ. ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ಹೇಳಿಕೆ.
key words : Mysore-urban-development-authority-MUDA-rajeev-press.meet-metro-group-houses-proposal