ಮೆಗಾ ಲೋಕ್ ಅದಾಲತ್‌ನಲ್ಲಿ ವಿಚ್ಚೇದಿತ ದಂಪತಿಗೆ ‘ ಮರು ಮದುವೆ‌’ ಭಾಗ್ಯ.

 

ಮೈಸೂರು, ಆ.14, 2021 : (www.justkannada.in news) : ಇಂದು ನಡೆದ ಮೆಗಾ ಲೋಕ ಅದಾಲತ್ ನಲ್ಲಿ ಐದು ವರ್ಷದ ಹಿಂದೆ ವಿಚ್ಚೇದನೆ ಪಡೆದ ದಂಪತಿಗೆ ಮರು ಮದುವೆ‌ ಭಾಗ್ಯ ಲಭಿಸಿದೆ.

ಈ ಬಗ್ಗೆ ಇಂದು ಮಳಲವಾಡಿ ನೂತನ ನ್ಯಾಯಾಲಯದ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಲೋಕ್ ಅದಾಲತ್ ನಲ್ಲಿ ಶನಿವಾರ ಒಂದೇ ದಿನ ೧೨ ಸಾವಿರ ಪ್ರಕರಣ ಸುಖಾಂತ್ಯಗೊಳಿಸಲಾಗಿದೆ. ರಾಜೀ ಸಂಧಾನ ಮೂಲಕ ೧೨ ಸಾವಿರ ಪ್ರಕರಣಗಳು ಇತ್ಯರ್ಥ ಮಾಡಲಾಗಿದೆ‌. ಇನ್ನೂ ೨ ಸಾವಿರ ಪ್ರಕರಣಗಳು ಸುಖಾಂತ್ಯ ಕಾಣುವ ವಿಶ್ವಾಸವಿದೆ. ೧೯ ಕೌಟುಂಬಿಕ ಪ್ರಕಾರಗಳನ್ನು ರಾಜಿ ಸಂಧಾನ ಮಾಡಲಾಗಿದೆ.

ಮೆಗಾ ಲೋಕ್ ಅದಾಲತ್‌ನಲ್ಲಿ ಮದುವೆ ಕಾರ್ಯ

ಡೈವರ್ಸ್ ರದ್ದುಗೊಳಿಸಿ ಮರು ಮದುವೆ. ದಂಪತಿಗಳ ಮನವೊಲಿಸಿ ಮರು ಮದುವೆ. ೨೫ ವರ್ಷ ದಾಂಪತ್ಯ ಜೀವನ ನಡೆಸಿ ಐದು ವರ್ಷಗಳ ಹಿಂದೆ ವಿಚ್ಚೇದನ ಪಡೆದಿದ್ದ ದಂಪತಿ. ಮೈಸೂರಿನ ಜ್ಯೋತಿ ನಗರದ ನಿವಾಸಿಗಳು. ಮೂರು ಮಕ್ಕಳ ೧ ಗಂಡು ೨ ಹೆಣ್ಣು ಮಕ್ಕಳನ್ನು ಹೊಂದಿದ್ದ ದಂಪತಿ. ವೈಯುಕ್ತಿಕ ಮನಃಸ್ಥಾಪಗಳಿಂದ ವಿಚ್ಚೇದನ ಪಡೆದಿದ್ದ ದಂಪತಿ. ಇಂದು ನ್ಯಾಯಾಧೀಶರು ಸಮ್ಮುಖದಲ್ಲಿ ಮರು ವಿವಾಹವಾದ ದಂಪತಿ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ ಭೂತೆ ಸುದ್ದಿಗೋಷ್ಠಿಯಲ್ಲಿ ಭಾಗಿ.

key words : mysore-lok.adalath-court-divorce-couple-re.marriage