ಮೈಸೂರು,ಆಗಸ್ಟ್,17,2021(www.justkannada.in): ಮೈಸೂರು ಗಡಿ ಜಿಲ್ಲೆಯಾದರೂ ಪಾಸಿಟಿವ್ ಶೇಕಡಾವಾರು ಕಡಿಮೆ ಇದೆ. ಇಲ್ಲಿ ಶಾಲೆ ಆರಂಭಿಸಲು ಅನುಮತಿ ಕೊಡಿ ಎಂದು ಸರಕಾರಕ್ಕೆ ಹೇಳಿದ್ದೇವೆ ಎಂದು ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, 9, 10 ನೇ ತರಗತಿ ಆರಂಭಿಸಲು ಮೈಸೂರು ಜಿಲ್ಲಾಡಳಿತ ಸಜ್ಜಾಗಿದೆ. ಶಾಲೆಗಳಿಗೆ ಸ್ಯಾನಿಟೈಸರ್ ಮಾಡಿಸಲು ಸೂಚಿಸಿದ್ದೇನೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಮಕ್ಕಳನ್ನು ತರಗತಿಯಲ್ಲಿ ಕೂರಿಸಲು ಹೇಳಲಾಗಿದೆ. ಜಿಲ್ಲೆಯ 130 ಪ್ರೌಢಶಾಲಾ ಶಿಕ್ಷಕರು ಮಾತ್ರ ಇನ್ನೂ ವಾಕ್ಸಿನ್ ಹಾಕಿಸಿ ಕೊಂಡಿಲ್ಲ. ಅವರಿಗೆ ನಾಳೆಯೆ ಲಸಿಕೆ ಹಾಕಿಸಲಾಗುವುದು. ಇನ್ನು ಗ್ರಾಮಾಂತರ ಶಾಲೆಗಳಲ್ಲಿ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವಿಚಾರದಲ್ಲಿ ನಿಗಾ ಇಡಲು ಟೀಂಗಳನ್ನು ರಚನೆ ಮಾಡಿದ್ದೇವೆ ಎಂದು ತಿಳಿಸಿದರು.
ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಸುವುದು ಬೇಡ.
ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಸುವುದು ಬೇಡ. ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇನೆ. ಮುಂದುವರಿಸಲೇ ಬೇಕು ಎಂದಾದದರೆ ಮಧ್ಯಾಹ್ನ 2 ಗಂಟೆಯವರೆಗೂ ಎಲ್ಲಾ ವ್ಯಾಪಾರಕ್ಕೂ ಅವಕಾಶ ಕೊಡಿ ಎಂದು ಹೇಳಿದ್ದೇನೆ. ಈ ಬಗ್ಗೆ ಸಿಎಂ ತೀರ್ಮಾನಿಸುತ್ತಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
Key words: Mysore- District -Government -start –school-Minister- ST Somashekhar.