ಯಾದಗಿರಿ,ಆಗಸ್ಟ್,19,2021(www.justkannada.in): ಜನಾಶೀರ್ವಾದ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನ ಸ್ವಾಗತ ಕೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇಲೆ ಯಾದಗಿರಿ ಗ್ರಾಮಾಂತರ ಪಿಎಸ್ ಐ ಹಾಗೂ ಮೂವರು ಕಾನ್ಸ್ ಟೇಬಲ್ ಗಳನ್ನ ಸಸ್ಪೆಂಡ್ ಮಾಡಲಾಗಿದೆ.
ಯಾದಗಿರಿ ಪಿಎಸ್ ಐ ಸುರೇಶ್ ಸೇರಿ ಮೂವರು ಕಾನ್ಸ್ ಟೇಬಲ್ ಗಳನ್ನ ಅಮಾನತು ಮಾಡಲಾಗಿದೆ. ನಿನ್ನೆ ಯಾದಗಿರಿ ತಾಲೂಕಿನ ಯರಗೋಳಗ್ರಾಮದ ಬಳಿ ಬಿಜೆಪಿ ಜನಾಶೀರ್ವಾದ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಲಾಗಿತ್ತು. ಅವರ ಬೆಂಬಲಿಗರೇ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಕೋರಿದ್ದರು. ಗಾಳಿಯಲ್ಲಿ ಗುಂಡು ಹಾರಿಸಲು ನಾಡ ಬಂದೂಕು ವ್ಯವಸ್ಥೆಯನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾಡಿದ್ದರು ಎನ್ನಲಾಗಿತ್ತು.
ಈ ಕುರಿತು ಪ್ರಕರಣ ದಾಖಲಾಗಿ ಮೂವರನ್ನ ಬಂಧಿಸಲಾಗಿತ್ತು. ಇದೀಗ ಕರ್ತವ್ಯ ಲೋಪ ಆರೋಪದ ಮೇಲೆ ಪಿಎಸ್ ಐ ಮತ್ತು ಮೂವರು ಕಾನ್ಸ್ ಟೇಬಲ್ ಸಸ್ಪೆಂಡ್ ಮಾಡಲಾಗಿದೆ.
Key words: Welcome -Union Minister-bagavantha Khooba-firing-case-PSI -constable -suspend.