ಬೆಂಗಳೂರು,ಜು,19,2019(www.justkannada.in): ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಿದರೂ ರಾಜ್ಯ ಸರ್ಕಾರ ರಾಜ್ಯಪಾಲರ ಡೆಡ್ ಲೈನ್ ಮೀರಿದ ಹಿನ್ನೆಲೆ , ಕೇಂದ್ರ ಗೃಹ ಕಾರ್ಯದರ್ಶಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಧ್ಯಂತರ ವರದಿ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ನಿರ್ದೇಶನ ನೀಡಿದ್ದರು. ಆದರೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದು, ತಾವು ನೀಡಿದ ಡೆಡ್ ಲೈನ್ ನಲ್ಲಿ ವಿಶ್ವಾಸಮತಯಾಚನೆ ಮಾಡದ ಹಿನ್ನೆಲೆ ರಾಜ್ಯಪಾಲರು ಕೇಂದ್ರ ಗೃಹಕಾರ್ಯದರ್ಶಿಗೆ ಮಧ್ಯಂತರ ವರದಿ ನೀಡಿದ್ದಾರೆ.
ರಾಜ್ಯಪಾಲರ ವಿಶೇಷಾಧಿಕಾರಿಗಳು ಸದನ ಕಲಾಪದಲ್ಲಿ ಭಾಗವಹಿಸಿ ಕಲಾಪ ವೀಕ್ಷಿಸಿದರು. ಸಿಎಂ ವಿಶ್ವಾಸಮತಯಾಚಿಸದ ಹಿನ್ನೆಲೆ ರಾಜಭವನಕ್ಕೆ ವಾಪಸ್ಸಾಗಿದ್ದರು.
Key words: deadline – government-Governor – interim report – Union Home Secretary.