ಮೈಸೂರು, ಆಗಸ್ಟ್ 22, 2021 (www.justkannada.in): ಕೆ.ಎಸ್.ಒ.ಯು 2012-13 ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹೋರಾಟದ ಫಲವಾಗಿ ಕೆ.ಎಸ್.ಒ.ಯು ತನ್ನ ಆದೇಶವನ್ನ ಹಿಂಪಡೆದಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮು ಹೇಳಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, Collaboration centre ಗಳ ಮೂಲಕ ಪದವಿ ಪ್ರಮಾಣ ಪತ್ರ ನೀಡಲು ಕೆ.ಎಸ್.ಒ.ಯು ಮುಂದಾಗಿತ್ತು. ಆದರೆ ನಿಯಮಗಳ ಪ್ರಕಾರ Collaboration centre ಗಳ ಮೇಲೆ ಯಾವುದೇ ಕೇಸ್ ಇಲ್ಲದಿದ್ದರೆ ಮಾತ್ರ ಅವರ ಮೂಲಕ ಪದವಿ ಪ್ರಮಾಣ ಪತ್ರ ನೀಡಬಹುದು ಎಂದು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಕೆ.ಎಸ್.ಒ.ಯು ಕುಲಪತಿ ವಿದ್ಯಾಶಂಕರ್ ರಾಜ್ಯಪಾಲರ ಆದೇಶವನ್ನ ತಿರುಚಿ ಪ್ರಮಾಣ ಪತ್ರ ವಿತರಣೆಗೆ ಮುಂದಾಗಿದ್ದರು ಎಂದು ದೂರಿದರು.
ಕೇವಲ ಹಣ ಮಾಡುವ ಉದ್ದೇಶದಿಂದ ಈ ರೀತಿ ಆದೇಶವನ್ನ ತಿರುಚಲಾಗಿತ್ತು. ಆದರೆ ನನ್ನ ಹೋರಾಟದ ಫಲವಾಗಿ ಮುಕ್ತ ವಿವಿ ತನ್ನ ಆದೇಶವನ್ನ ಹಿಂಪಡೆದಿದೆ. ವಿವಿ ಕುಲಪತಿಗಳ ಧನದಾಹಕ್ಕೆ ಮತ್ತೊಮ್ಮೆ ಮುಕ್ತ ವಿವಿ ಮುಚ್ಚುವ ಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯಪಾಲರ ಆದೇಶ ತಿರುಚಿದ ಆರೋಪದಡಿ ಕಾನೂನು ಹೋರಾಟ ಮಾಡ್ತೀನಿ ಎಂದು ಸುದ್ದಿಗೋಷ್ಠಿಯಲ್ಲಿ ಕೆ.ಎಸ್. ಶಿವರಾಮು ಹೇಳಿದರು.