ಬೆಂಗಳೂರು,ಜು,19,2019(www.justkannada.in): ರಾಜ್ಯಪಾಲರು ನಿರ್ದೇಶನ ಸಲಹೆ ನೀಡಬಹುದು. ಆದ್ರೆ ಚರ್ಚೆಯಾಗದೆ ನಮ್ಮ ಅಭಿಪ್ರಾಯ ಆಲಿಸದೆ ಬಹುಮತ ಸಾಬೀತುಪಡಿಸಲು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್, ಈ ಹಿಂದೆ ವಿಶ್ವಾಸಮತಯಾಚನೆಗೆ 15 ದಿನ ನೀಡಿದ್ದಾರೆ. ಆದ್ರೆ ಈಗ ರಾಜ್ಯಪಾಲರು ಡೆಡ್ ಲೈನ್ ಕೊಡ್ತಾರೆ. ಇದರ ಹಿಂದೆ ಸರ್ಕಾರ ಬೀಳಿಸುವ ಷಡ್ಯಂತ್ರ ಇದೆ. ಚರ್ಚೆ ಬೇಡ ಎಂದು ಬಿಜೆಪಿ ಏಕೆ ಹಠ ಹಿಡಿದಿದೆ ಗೊತ್ತಿಲ್ಲ. ಬಿಜೆಪಿ ವಿರುದ್ದ ನೇರ ಆರೋಪ ಮಾಡಿದ್ರೂನ ಉತ್ತರ ಇಲ್ಲ. ಮೌನಂ ಸಮ್ಮತಿ ಲಕ್ಷಣಂ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯಪಾಲರ ಡೆಡ್ ಲೈನ್ ಬಗ್ಗೆ ಕೃಷ್ಣೇಭೈರೇಗೌಡರು ಮಾತನಾಡಿದ್ದಾರೆ. ವಿಶ್ವಾಸಮತಯಾಚನೆಗೆ ಹಲವಾರು ದಿನ ನಡೆದ ಉದಾಹರಾಣೆ ಇದೆ. ಶಾಸಕರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಬೇಕು. ನೀವು ಒತ್ತಾಯಿಸುವಂತೆ ಮಾಡಲಾಗುವುದಿಲ್ಲ ನಿಮಗೆ ನಿಮ್ಮ ಸಂಖ್ಯಾಬಲದ ಮೇಲೆ ನಂಬಿಕೆ ಇಲ್ಲ. ಅವರ ಒಂದೇ ಗುರಿ ಕುರ್ಚಿ ಕೂರುವುದು. ಅದಕ್ಕೆ ಅವರಿಗೆ ಆತುರ ಜಾಸ್ತಿ. ವಿಶ್ವಾಸಮತಯಾಚನೆ ಇಂದು ಆಗಬಹುದು ಸೋಮವಾರವೂ ಆಗಬಹುದು ಎಂದು ದಿನೇಶ್ ಗುಂಡೂರಾವ್ ಬಿಜೆಪಿಗೆ ಟಾಂಗ್ ನೀಡಿದರು.
Key words: prove – majority –without- listening – our opinion-Dinesh Gundurao -Assembly