ಮೈಸೂರು,ಮೇ,7,2019(www.justkannada.in): ಪಾರಂಪರಿಕ ಪ್ರತಿಮೆಗಳ ಉಳಿವಿಗಾಗಿ ಪುರಾತತ್ವ ಇಲಾಖೆ ಮತ್ತು ಪಾರಂಪರಿಕ ತಜ್ಞರ ಸಮಿತಿ ಪ್ರತಿಮೆಗಳ ಸ್ಥಳಾಂತರ ಕಾರ್ಯದಲ್ಲಿ ತೊಡಗಿದೆ. ಈ ನಡುವೆ ಅಶ್ವದಳ ಅಧಿಕಾರಿ ಭುಜರಂಗರಾವ್ ಪ್ರತಿಮೆ ಸ್ಥಳಾಂತರಕ್ಕೆ ಪಾರಂಪರಿಕ ತಜ್ಞರ ಸಮಿತಿ ಸಿದ್ಧತೆ ನಡೆಸಿದೆ.
ಹೀಗಾಗಲೇ ಪಾರಂಪರಿಕ ತಜ್ಞರ ಸಮಿತಿಯಿಂದ ಅಂಚೆ ವಿತರಕ ಬಸಪ್ಪ ಪ್ರತಿಮೆ ಸ್ಥಳಾಂತರ ಯಶಸ್ವಿಯಾಗಿದ್ದು, ಇದೀಗ ಅಶ್ವದಳ ಅಧಿಕಾರಿ ಭುಜರಂಗರಾವ್ ಪ್ರತಿಮೆ ಸ್ಥಳಾಂತರ ಸಿದ್ದತೆ ನಡೆಸಲಾಗುತ್ತಿದೆ. ಪಾರಂಪರಿಕ ತಜ್ಞರ ಸಮಿತಿಯ ಪ್ರೋ ,ರಂಗರಾಜು ನೇತೃತ್ವದಲ್ಲಿ ಶಿಪ್ಟಿಂಗ್ ಕಾರ್ಯ ನಡೆಯುತ್ತಿದ್ದು, ಇಂದು ಭುಜರಂಗರಾವ್ ಸ್ಥಳಾಂತರದ ಪ್ಯಾಕಿಂಗ್ ಕಾರ್ಯ ನಡೆಯಿತು. ಪ್ರತಿಮೆಗೆ ನೆಲ್ಲಹುಲ್ಲು ಹಾಕಿ ನುರಿತ ಸಿಬ್ಬಂದಿಗಳು ಪ್ಯಾಕಿಂಗ್ ಮಾಡಿದ್ದಾರೆ.
ನಾಳೆ ಮ್ಯಾನ್ ಪವರ್ ನಿಂದಲೇ ಶಿಪ್ಟಿಂಗ್ ಕಾರ್ಯ ನಡೆಯಲಿದೆ. ಪ್ರತಿಮೆಗಳಿಗನ್ನು ವಾಹನಗಳಿಂದ ರಕ್ಷಸುವ ನಿಟ್ಟಿನಲ್ಲಿ ಕೆಎಸ್ಆರ್ಪಿ ಪ್ರವೇಶ ದ್ವಾರದದಿಂದ ಹದಿನೈದು ಅಡಿ ಹಿಂದಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ಅಶ್ವದಳ ಅಧಿಕಾರಿ ಭುಜರಂಗರಾವ್ ಮತ್ತು ಅಂಚೆ ವಿತರಕ ಬಸಪ್ಪ ಪ್ರತಿಮೆ ಗಳು ಸರಿಸುಮಾರು 112 ವರ್ಷಗಳಿಂದ ಸ್ಥಾಪಿತಗೊಂಡಿದ್ದವು ಎನ್ನಲಾಗಿದೆ.
Key words: Mysore-displacement – two statues- Heritage- Expert- Committee