ಮೈಸೂರು,ಸೆಪ್ಟಂಬರ್,3,2021(www.justkannada.in): ಮಾನಸ ಗಂಗೋತ್ರಿ ಕ್ಯಾಂಪಸ್ ಪ್ಲಾಸ್ಟಿಕ್ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಸ್ವಚ್ಛತಾ ಅಭಿಯಾನ ಸಮಿತಿ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಸಂಸ್ಥೆ (IQAC) ಜಂಟಿಯಾಗಿ ಶುಕ್ರವಾರ ಬೆಳಗ್ಗೆ ಮಾನಸಗಂಗೋತ್ರಿಯ ಬಯಲು ರಂಗಮಂಟಪ ರೌಂಡ್ ಕ್ಯಾಂಟೀನ್ ಬಳಿ ಆಯೋಜಿಸಿದ್ದ ‘ಸ್ವಚ್ಛ ಗಂಗೋತ್ರಿ ಸಪ್ತಾಹ’ವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಎಚ್.ವಿ.ರಾಜೀವ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್, ಮಾನಸ ಗಂಗೋತ್ರಿ ಕ್ಯಾಂಪಸ್ ಪ್ಲಾಸ್ಟಿಕ್ ಮುಕ್ತವಾಗಬೇಕು. ಇನ್ಮುಂದೆ ಎರಡು ತಿಂಗಳಿಗೊಮ್ಮೆ ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ವೃಂದದೊಂದಿಗೆ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗುವುದು. ನಿಮ್ಮ ಮನೆಯಂತೆ ಗಂಗ್ರೋತಿಯನ್ನು ಶುಚಿಯಾಗಿಟ್ಟುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮಾನಸಗಂಗೋತ್ರಿಯನ್ನು ಕುವೆಂಪು ಅವರಿಂದ ಹಿಡಿದು ಸಾಕಷ್ಟು ಕುಲಪತಿಗಳು ಅಭಿವೃದ್ಧಿಪಡಿಸಿದ್ದಾರೆ. ಇಲ್ಲಿ ಎಲ್ಲವೂ ಇದೆ. ಸ್ವಲ್ಪ ನೀರಿನ ಕೊರತೆ ಇದೆ. ಸದ್ಯ ಬೋರ್ ವೆಲ್‌ನೀರು ಪೂರೈಕೆ ಆಗುತ್ತಿದೆ. ಕಾವೇರಿ ನೀರು ಹರಿಸಲು ಮಾತುಕತೆ ನಡೆಸಲಾಗಿದೆ. ಶೀಘ್ರದಲ್ಲೇ ಕ್ಯಾಂಪಸ್ ಗೆ ಕಾವೇರಿ ನಿಗಮದಿಂದ ಶುದ್ಧ ಕಾವೇರಿ ನೀರು ಸರಬರಾಜು ಆಗಲಿದೆ ಎಂದರು.
ಸ್ವಚ್ಚತಾ ಕಾರ್ಯ ಏಜೆನ್ಸಿ ಕೆಲಸವಲ್ಲ, ಅದು ನಮ್ಮ ಕರ್ತವ್ಯ: ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್
ನಂತರ ಮಾತನಾಡಿದ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಸ್ವಚ್ಛ ಭಾರತ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯೇ ನಮಗೆ ಪ್ರೇರಣೆ ನೀಡಿತು. ಮೈಸೂರು ನಗರವನ್ನು ನಾವೇ ಸ್ವಚ್ಛಗೊಳಿಸುತ್ತೇವೆ ಎಂಬ ಭ್ರಮೆ ನಮಗೆ ಇರಲಿಲ್ಲ. ಎಲ್ಲಾ ಅಹಂ ಬದಿಗಿಟ್ಟು ಕೆಲಸ ಮಾಡಿದೆವು. ಎಲ್ಲಿ ಬೇಕಾದರೂ ಹೋಗಿ ಏನಾದರೂ ಮಾಡುತ್ತೇವೆ ಎಂಬ ಶುದ್ಧ ಮನಸ್ಥಿತಿಯಲ್ಲಿ ಕೆಲಸ ಮಾಡಿದೆವು. ದಲಿತರ ಕಾಲೋನಿಯಿಂದ ಹಿಡಿದು ರುದ್ರಭೂಮಿ, ಶಾಲಾವರಣ, ದೇಗುಲ, ರಸ್ತೆ ಬದಿಗಳಲ್ಲಿ ಸ್ವಚ್ಚತಾ ಕೆಲಸ ಮಾಡಿದೆವು ಎಂದರು.
ಹಣದಿಂದ ಎಲ್ಲವನ್ನೂ ಮಾಡಿಸಲು ಆಗುವುದಿಲ್ಲ. ಸ್ವಚ್ಚತೆ ಎಂಬುದು ಏಜೆನ್ಸಿ ಕೆಲಸವಾಗಬಾರದು. ಅದು ನಮ್ಮೆಲ್ಲರ ಕರ್ತವ್ಯ ಆಗಬೇಕು. ನಮ್ಮ ಮನಸ್ಸಿನಲ್ಲಿ ಹೆಪ್ಪುಗಟ್ಟಿದ ಅಹಂ ಭಾವನೆ ತೆಗೆದು ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ, ಸಿಂಡಿಕೇಟ್ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ, ಮೈಸೂರು ವಿವಿ ಎನ್ ಎನ್ ಎಸ್ ಕಾರ್ಯಕ್ರಮಾಧಿಕಾರಿ ಡಾ.ಸುರೇಶ್, ಆಂತರಿಕ ಗುಣಮಟ್ಟ ಖಾತ್ರಿ ಸಂಸ್ಥೆ ನಿರ್ದೇಶಕ ಡಾ. ಎನ್.ಎಸ್. ಹರಿನಾರಾಯಣ, ಸ್ವಚ್ಛತಾ ಅಭಿಯಾನ ಸಮಿತಿ ಅಧ್ಯಕ್ಷ ಡಾ. ಎಂ.ವೈ, ಶ್ರೀನಿವಾಸ, ಅಮೃತೇಶ್ , ಪ್ರತಾಪ್, ಪವಿತ್ರ ಸೇರಿದಂತೆ ಇತರರು ಇದ್ದರು.
ENGLISH SUMMARY…
UoM campus to be ‘Plastic-free’: VC Prof. G. Hemanth Kumar
Mysuru, September 3, 2021 (www.justkannada.in): Prof. G. Hemanth Kumar, Vice-Chancellor, University of Mysore has informed that a cleanliness drive has been initiated to make the University of Mysore campus plastic-free.
He participated in the cleanliness drive organized as part of the ‘Swachch Gangotri Week,’ held near the Open Air Theater Round Canteen in Manasagangotri campus today, jointly organized by the Swachatha Abhiyana Samiti, University of Mysore and Internal Quality Assessment Committee (IQAC). MUDA Chairman H.V. Rajeev inaugurated the program.
In his address, Prof. G. Hemanth KUmar said cleanliness drives would be undertaken once in two months with the participation of students, teaching, and non-teaching staff. He called upon the students to keep the campus clean like they do in their houses.
MUDA Chairman H.V. Rajeev in his address expressed his view that Prime Minister Narendra Modi’s call for a cleanliness drive was the inspiration behind organizing the program. “We did not have the perception of cleaning Mysuru city by ourselves. We all kept our egos aside and worked for that. All the officials were involved in cleaning many places including the Dalit colony, crematoriums, schools, temples, roads, footpaths, etc. It is not possible to do anything and everything with money. Cleanliness should not become the work of an agency. It should become our duty,” he said.
Prof. R. Shivappa, Registrar, University of Mysore, Syndicate members Dr. E.C. Ningaraj Gowda, University of Mysore NNS Program Officer Dr. Suresh, Internal Quality Assurance Committee Director Dr. N.S. Harinarayana, Cleanliness Drive Committee President Dr. M.Y. Srinivas, Amruthesh, Pratap, Pavitra, and others were present.
Keywords: University of Mysore/ Cleanliness drive/ Manasagangotri
Key words: Mysore university- Campus- Plastic Free- VC- Prof. G. Hemanth Kumar.