ರಾಜ್ಯದಲ್ಲಿ ಬಂಡವಾಳ ಹೂಡಲು ಥೈಲ್ಯಾಂಡ್ ಗೆ ಆಹ್ವಾನ.

ಬೆಂಗಳೂರು, ಸೆಪ್ಟಂಬರ್,4,2021(www.justkannada.in):  ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದರೆ ಅಂತಹ ಕಂಪೆನಿಗಳಿಗೆ ಎಲ್ಲ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಆಶ್ವಾಸನೆ ಕೊಟ್ಟಿದ್ದಾರೆ.

ಈ ಸಂಬಂಧ ಶನಿವಾರ ವಿಧಾನಸೌದದ ತಮ್ಮ ಕೊಠಡಿಯಲ್ಲಿ ಥೈಲ್ಯಾಂಡ್‍ನ ರಾಯಭಾರಿ ನಿತಿರೂಗೆ ಪೋನ್ ಪ್ರಸರ್ಟ್ ಅವರನ್ನು ಸಚಿವ ಮುರುಗೇಶ್ ನಿರಾಣಿ ಭೇಟಿಯಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಮನವರಿಕೆ ಮಾಡಿಕೊಟ್ಟರು.  ಇದೇ ಸಂದರ್ಭದಲ್ಲಿ ಥೈಲೆಂಡ್‍ ನ ರಾಯಭಾರಿ ಭಾರತದಲ್ಲಿ ಉದ್ಯಮ ನಡೆಸಲು ಸ್ಟಾರ್ಟಪ್ ಮತ್ತು ಹೆಚ್ಚಿನ ಅನ್ವೇಷಣೆ ಬಗ್ಗೆ ಗಮನ ಸೆಳೆದರು.  ಇದಕ್ಕೂ ಸಹ ಸಮ್ಮತಿಸಿದ ಸಚಿವ ಮುರುಗೇಶ್ ನಿರಾಣಿ ಅವರು ನೀವು ಸುಲಲಿತವಾಗಿ ಉದ್ಯಮ ನಡೆಸಲು ಯಾವೆಲ್ಲ ಸೌಲಭ್ಯಗಳು ಬೇಕೋ ಅವೆಲ್ಲವನ್ನೂ ಕಾಲಮಿತಿಯೊಳಗೆ ಒದಗಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು. ಮುಕ್ತ ಮನಸ್ಸಿನಿಂದ ಬಂಡವಾಳ ಹೂಡಬೇಕು. ಕರ್ನಾಟಕ ಸರ್ಕಾರ 2020-25ನೆ ಸಾಲಿನ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದೆ. ಇದು ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿದೆ. ಇಡೀ ದೇಶಕ್ಕೆ ಮಾದರಿಯಾಗುವಂತಹ ನೀತಿ ಇದಾಗಿದೆ ಎಂದು ಪ್ರಶಂಸಿಸಿದರು.

ಕರ್ನಾಟಕ ಇಂದು ದೇಶದಲ್ಲೇ ಅತಿ ಹೆಚ್ಚು ವಿದೇಶಿ ಬಂಡವಾಳ ಆಕರ್ಷಿಸುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ನಾವು ಉದ್ಯಮಿಗಳಿಗೆ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ. ಮುಂಚೂಣಿಯಲ್ಲಿರುವ ಅನೇಕ ಜಾಗತಿಕ ಕಂಪೆನಿಗಳು ಇಂದು  ಬಂಡವಾಳ ಹೂಡಿಕೆ ಮಾಡಿವೆ ಎಂದು ಮುರುಗೇಶ್ ನಿರಾಣಿ ಹೇಳಿದರು.

2020-21 ರಲ್ಲಿ ಕರ್ನಾಟಕವು ವಿದೇಶಿ ಬಂಡವಾಳ ಆಕರ್ಷಣೆ ಮಾಡಿರುವ ಅತಿ ಹೆಚ್ಚು ರಾಜ್ಯಗಳಲ್ಲಿ ಮೂರನೆ ರಾಜ್ಯವಾಗಿದೆ. ಸುಮಾರು $7.6 ಬಿಲಿಯನ್ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ಇದು ದೇಶದ ಒಟ್ಟು ಶೇ.16ರಷ್ಟು ಎಂದು ಹೇಳಿದರು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶ್ವದ ಯಾವುದೇ ಭಾಗಕ್ಕೂ ತಲುಪುವ ಸೌಲಭ್ಯವಿದೆ. ವಿಶ್ವದ ಮುಂಚೂಣಿಯಲ್ಲಿರುವ ಸಿಪಿ ಗ್ರೂಪ್, ಅಲೈಡ್ ಮೆಟಲ್ಸ್, ಪ್ರಕ್ಷ ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಕಂಪೆನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮುರುಗೇಶ್ ನಿರಾಣಿ ಮನವರಿಕೆ ಮಾಡಿದರು.

ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿವೆ. ನವೀಕರಿಸಬಹುದಾದ ಇಂಧನ, ಆಟೋ ಮೊಬೈಲ್, ಜವಳಿ, ರೇಷ್ಮೆ, ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾವು ಇತರೆ ರಾಜ್ಯಗಳಿಗಿಂತ ಮುಂದಿದ್ದೇವೆ. ಬೆಂಗಳೂರು ವಿಶ್ವದ 4 ನೇ ಅತಿದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಲಸ್ಟರ್ ಆಗಿದೆ. ಸಾಂಕ್ರಾಮಿಕ ಪರಿಸ್ಥಿತಿಯ ಹೊರತಾಗಿಯೂ ಕರ್ನಾಟಕವು ಕೈಗಾರಿಕೆಗಳನ್ನು ಬೆಂಬಲಿಸಲು ಮತ್ತು ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಾಗಿದೆ ಎಂದು ಮುರುಗೇಶ್ ನಿರಾಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾರ್ಚ್ 2020 ರಲ್ಲಿ ಆರಂಭದಿಂದ ಕರ್ನಾಟಕವು ಯಶಸ್ವಿಯಾಗಿ 1 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹೂಡಿಕೆಗಳನ್ನು ಗಳಿಸಿದೆ. ಕೋವಿಡ್‌ ನ ಮೊದಲ ಅಲೆಯ ಸಮಯದಲ್ಲಿ, ಲಾಕ್‌ ಡೌನ್ ಅನ್ನು ತೆಗೆದು ಹಾಕಿದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ತಿಳಿಸಿದರು.

ಇದು ಪ್ರಮುಖ ಉದ್ಯಮಗಳಾದ ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ರಕ್ಷಣೆಗೆ  ಸಹಾಯ ಮಾಡಿತು.ಕೋವಿಡ್‌ ನ ಎರಡನೇ ತರಂಗದ ಸಮಯದಲ್ಲಿ, ಲಾಕ್‌ ಡೌನ್ ಸಮಯದಲ್ಲಿ ಅಗತ್ಯ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಯಿತು. ವಿಶ್ವದ ಅತಿದೊಡ್ಡ ಕೃಷಿ ಸಮೂಹಗಳಲ್ಲಿ ಒಂದಾದ 1997 ರಲ್ಲಿ ಸಿಪಿ ಗ್ರೂಪ್ – ರಾಜ್ಯಕ್ಕೆ ಬಂದಿತು. 2004 ರಿಂದ, ಥಾಯ್ ಏರ್ವೇಸ್ ಅಂತರಾಷ್ಟ್ರೀಯ ಸ್ಥಳಗಳಿಗೆ ಬೆಂಗಳೂರನ್ನು ನೇರವಾಗಿ ಸಂಪರ್ಕಿಸುವ ಮೊದಲ ವಿಮಾನಯಾನ ಸಂಸ್ಥೆಯಾಗಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ಸರ್ಕಾರ ರಾಜ್ಯದಲ್ಲಿ ಹೂಡಿಕೆದಾರರ ಸ್ನೇಹಪರತೆಯನ್ನು ಹೆಚ್ಚಿಸಲು  ಹಲವಾರು ಕ್ರಮಗಳನ್ನು ಕೈಗೊಂಡಿದೆ.  ನಾವು ಈಗಾಗಲೇ ಸಿಪಿ ಗ್ರೂಪ್, ಅಲೈಡ್ ಮೆಟಲ್ಸ್, ಪ್ರುಕ್ಸಾ ರಿಯಲ್ ಎಸ್ಟೇಟ್ ಮೊದಲಾದ ಬಹು ಥಾಯ್ ಕಂಪನಿಗಳಿಗೆ ನೆಲೆಯಾಗಿದ್ದು ಕರ್ನಾಟಕದಲ್ಲಿ ಉದ್ಯಮ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ‌ ಎಂಬುದನ್ನು ‌ತಿಳಿಸಿದರು.

ಕರ್ನಾಟಕ ಮತ್ತು ಥೈಲ್ಯಾಂಡ್‌ ನೊಂದಿಗೆ ಅಸ್ತಿತ್ವದಲ್ಲಿರುವ ಸಹಕಾರವನ್ನು ಹೆಚ್ಚಿಸುವ ಮೂಲಕ ಈ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಆಟೋ ಮತ್ತು ಆಟೋ ಎಲೆಕ್ಟ್ರಾನಿಕ್ಸ್,  ಆಹಾರ ಸಂಸ್ಕರಣೆ ಜವಳಿಯಂತಹ ಪ್ರಮುಖ ಉದ್ಯಮಗಳಲ್ಲಿ ಸಾಮ್ಯತೆಗಳು‌ ಇವೆ ಎಂದರು.

ಎಲೆಕ್ಟ್ರಾನಿಕ್ಸ್ ವಿನ್ಯಾಸ, ಭಾರತದಲ್ಲಿ ರೇಷ್ಮೆ, ಕಾಫಿ ಉತ್ಪಾದನೆ, ನವೀಕರಿಸಬಹುದಾದ ಇಂಧನ ಮೆಷಿನ್ ಟೂಲ್ಸ್ ತಯಾರಿಕೆ, ಭಾರತದ ಯಂತ್ರೋಪಕರಣಗಳ ಉತ್ಪಾದನೆಯಲ್ಲಿ 52% ಪಾಲು ಕರ್ನಾಟಕದ್ದಾಗಿದೆ ಎಂದು ಅಂಕಿ ಅಂಶಗಳ ವಿವರ ನೀಡಿದರು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬಂದರೆ ಅಗತ್ಯವಿರುವ ವಿದ್ಯುತ್, ನೀರು, ರಸ್ತೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿಕೊಡಲಿದ್ದೇವೆ ಎಂದು ಮುಕ್ತ ಮನಸ್ಸಿನಿಂದ ಬಂಡವಾಳ ಹೂಡಲು ಮುಂದೆ ಬರಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಮನವಿ ಮಾಡಿದರು.

ENGLISH SUMMARY…

OOD INVESTMENT OPPORTUNITIES IN KARNATAKA: NIRANI TO THAI DELEGATION

• Nirani briefs Thai delegation about investment opportunities
• Welcomes Thai firms to make investments in Karnataka
• Says Karnataka is the ideal destination for investments

Bengaluru, September 4: In an effort to further strengthen the Karnataka-Thai relationship, Mr. Nitirgooge Phoneprasert, Consul General of Thailand in Chennai held talks with Large and Medium Industries Minister Murugesh Nirani and discussed business opportunities in the State.

Briefing the Thai delegation about the investment opportunities, Minister Nirani said Karnataka is the ideal destination for investments. “Our government has taken several measures to enhance the investor-friendly atmosphere. Karnataka is the third highest FDI recipient in India in 2020-21 at $7.6 billion with 14% national share. We are very keen to further strengthen this partnership by leveraging the existing synergies between Karnataka & Thailand. We share many similarities across major industries like Auto & Auto Components, Electronics, Food Processing and Textiles to name a few,” Nirani told the Thai delegation.

Inviting the Thai firms to make investments in Karnataka, Nirani promised to extend all the facilities and assistance mainly focusing innovation & start-up sector.
“Karnataka holds a very strong relationship with Thailand, and we are keen to strengthen our relationship further. Thai businesses are among the forerunners of foreign investors in Karnataka. We are already home to multiple Thai companies like CP Group, Allied Metals, Pruksa Real Estate etc. operating in Karnataka across industry sectors,” Nirani stated.

Minister Nirani explained about the New Industrial Policy 2020-25 and various subsidies, incentives and other benefits for investors. “Karnataka has attracted more than Rs 1 lakh crore investments since COVID-19 pandemic in March 2020. Bengaluru is the world’s 4th largest technology & innovation cluster. We aim to become an integral part of the global value chain. We would like to partner with Thailand and lead the path of sustainable growth and development together,” Nirani told the Thai delegation.

Key words: Thailand -invites – invest – state-minister –murugesh nirani