ತುಮಕೂರು, ಜುಲೈ 21, 2019 (www.justkannada.in): ರೇವಣ್ಣ ಕೆಎಂಎಫ್ ನಲ್ಲಿ ಸಾಕಷ್ಟು ಹಗರಣ ನಡೆಸಿದ್ದಾರೆ. ಝೀರೋ ಟ್ರಾಫಿಕ್ ಮಂತ್ರಿ ಕೂಡ ಸೂಪರ್ ಸೀಡ್ ತನಿಖೆಗೆ ಸಹಿ ಮಾಡಿದ್ದಾರೆ ಎಂದು ತುಮಕೂರಿನಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಆರೋಪಿಸಿದ್ದಾರೆ.
ಡಿಸಿಎಂ ಪರಮೇಶ್ವರ್ ಒಡೆತನದ ಸಿದ್ದಾರ್ಥ ವಿದ್ಯಾಸಂಸ್ಥೆಗಳಲ್ಲಿ ಸಾಕಷ್ಟು ಹಗರಣ ನಡೆದಿದೆ. ಬೇಗೂರು ಬಳಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಪಡೆದು ಬ್ಯಾಂಕ್ ಕಾಲೇಜು ನಿರ್ಮಾಣ ಮಾಡಿದ್ದಾರೆ. ಈ ಜಾಗ ವಿಚಾರದಲ್ಲಿ ಹೈಕೋರ್ಟ್ ಗೂ ವಂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇವರೆಲ್ಲರ ಬಗ್ಗೆ ತನಿಖೆ ನಡೆಸುವಂತೆ ಮಾಡ್ತೇನೆ ಎಂದು ರಾಜಣ್ಣ ಟಾಂಗ್ ನೀಡಿದ್ದಾರೆ.