ಮೈಸೂರು,ಸೆಪ್ಟಂಬರ್,12,2021(www.justkannada.in): ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕುರುಬರ ಹೊಸಹಳ್ಳಿ ಗ್ರಾಮದಲ್ಲಿನ ದಂಡು ಮಾರಮ್ಮ ದೇಗುಲದಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ನಡೆದಿದೆ.
ಕುರುಬರ ಹೊಸಹಳ್ಳಿಯ ದಂಡು ಮಾರಮ್ಮ ದೇಗುಲದಲ್ಲಿ ಬಾಗಿಲು ಹಾಕಿದ್ದಾಗ ಕಳ್ಳರು ಈ ಕೃತ್ಯವೆಸಗಿದ್ದಾರೆ. ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನ ದೋಚಿ ಪರಾರಿಯಾಗಿದ್ದಾರೆ. ಇದೇ ದೇವಸ್ಥಾನದಲ್ಲಿ ಆರರಿಂದ ಏಳು ಬಾರಿ ಕಳ್ಳತನವಾಗಿದೆ ಎನ್ನಲಾಗಿದೆ.
ಹಬ್ಬದ ಹಿನ್ನೆಲೆ ಆಭರಣದ ಆಸೆಗಾಗಿ ಕಳ್ಳರು ಕಳ್ಳತನ ಮಾಡಲು ಬಂದಿದ್ದರು. ಆದರೆ ಗ್ರಾಮಸ್ಥರು ಆಭರಣ ಹಬ್ಬದ ದಿನವೇ ತೆಗೆದಿಟ್ಟಿದ್ದರು. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: mysore- thief-theft-temple