ತಜ್ಞರು ಒಪ್ಪಿದ್ರೆ 1 ರಿಂದ 5ನೇ ತರಗತಿ ಆರಂಭ- ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಚಿಕ್ಕಬಳ್ಳಾಪುರ,ಸೆಪ್ಟಂಬರ್,14,2021(www.justkannada.in):   ತಜ್ಞರು ಒಪ್ಪಿಗೆ ನೀಡಿದರೇ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಪುನಾರಂಭ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, 1.ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಮಕ್ಕಳು ಹೇಗೆ ನಿಯಮ ಪಾಲಿಸುತ್ತಾರೆ ಎಂಬ ಭಯವಿದೆ. ಈ ವಿಚಾರದ ಬಗ್ಗೆ ತಜ್ಞರ ಜತೆ ಚರ್ಚಿಸಲಾಗುತ್ತದೆ.  ತಜ್ಞರು ಒಪ್ಪಿದ್ರೆ ಶಾಲೆ ಆರಂಭ ಮಾಡುತ್ತೇವೆ ಎಂದರು.

ಇನ್ನು ಆಫ್ ಲೈನ್, ಆನ್ ಲೈನ್ ತರಗತಿ ಕಡ್ಡಾಯವಾಗಿದೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು.  ಕೊರೋನಾ 3ನೇ ಅಲೆ ನಡುವೆ ರಾಜ್ಯದಲ್ಲಿ  ಹಂತ ಹಂತವಾಗಿ ಅಂದರೆ ಮೊದಲು 9,10, ಮತ್ತು ಪಿಯು ತರಗತಿಗಳನ್ನ ಆರಂಭಿಸಲಾಗಿತ್ತು. ನಂತರ 6ರಿಂದ 8ನೇ ತರಗತಿ ಆರಂಭ ಮಾಡಲಾಗಿದೆ.

ENGLISH SUMMARY…

Permission to start school from 1st to 5th standards if experts agree: Education Minister B.C. Nagesh
Chikkaballapura, September 14, 2021 (www.justkannada.in): Primary and Secondary Education Minister B.C. Nagesh today informed that 1st standard to 5th standard classes would be started in classes soon if experts permit.
Speaking in Chikkaballapura today, he informed the department has made all required arrangements to recommence the classes. “However, we are a little worried how the children would follow COVID guidelines. We will discuss this with the experts and commence the classes if the experts agree,” he said.
He also informed that however online, offline classes are made compulsory. Classes from 9th, 10th, and PUC were started in phases amidst the fear of the COVID 3rd wave. Classes from 6th to 8th standards have also been started.
Keywords: Primary Education Minister/ B.C. Nagesh/ classes/ 1st to 5th standard/ commence/ expert opinion/ agree

Key words:  Experts –agree- 1st to 5th grade- start- Education Minister -BC Nagesh.