ಬೆಂಗಳೂರು,ಸೆಪ್ಟಂಬರ್,14,2021(www.justkannada.in): ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು ಈ ನಡುವೆ ವಿಧಾನಸಭಾ ಸಭೆ ಕಲಾಪದಲ್ಲಿ ಎತ್ತಿನಹೊಳೆ ಯೋಜನೆ ಬಗ್ಗೆ ಪ್ರಸ್ತಾಪಿಸಲಾಯಿತು.
ಎತ್ತಿನಹೊಳೆ ಯೋಜನೆಯ ಅನುಷ್ಠಾನದ ಬಗ್ಗೆ ಸಚಿವ ಮಾಧುಸ್ವಾಮಿ ಮತ್ತು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಡುವೆ ವಾಗ್ವಾದ ನಡೆಯಿತು. ಶಾಸಕ ಪರಮೇಶ್ವರ್ ಮತ್ತು ಸಚಿವ ಮಾಧುಸ್ವಾಮಿ ನಡುವೆ ಜಟಾಪಟಿ ನಡೆಯಿತು.
ಯೋಜನೆಯನ್ನೇ ರಿಜೆಕ್ಟ್ ಮಾಡ್ತೇವೆ ಅಂದರೆ ಹೇಗೆ? 12,900 ಕೋಟಿಯಲ್ಲಿ ಯೋಜನೆ ಮುಗಿಸಬಹುದು, ಯೋಜನೆಗೆ26 ಸಾವಿರ ಕೋಟಿ ಹೆಚ್ಚುವರಿ ಯಾಕೆ? ನಿಮಗೆ ಇಚ್ಚಾಶಕ್ತಿಯಿದ್ದರೆ ಯೋಜನೆ ಮಾಡಬಹುದು ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಪರಮೇಶ್ವರ್ ಗರಂ ಆದರು.
ಈ ವೇಳೆ ಪರಮೇಶ್ವರ್ ಗೆ ತಿರುಗೇಟು ನೀಡಿದ ಸಚಿವ ಮಾಧುಸ್ವಾಮಿ, ಯೋಜನೆಗೆ ನಾವು ಅವಕಾಶ ಕೊಟ್ಟಿದ್ದೇವೆ, ಹಣವಿಲ್ಲದಿದ್ರೂ ರೈತರನ್ನು ನಾವು ಒಪ್ಪಿಸಿದ್ದೇವೆ. ಯೋಜನೆ ಕಾಮಗಾರಿಗೆ ಅನುವು ಮಾಡಿದ್ದೇವೆ. ಆದರೆ ಕೊರಟಗೆರೆಯಲ್ಲಿ ಸಮಸ್ಯೆ ಶುರುವಾಗಿದೆ. ಹಾಗಾಗಿ ಯೋಜನೆಗೆ ತೊಡಕಾಗುತ್ತಿದೆ ಎಂದರು. ಯೋಜನೆ ಕಾಮಗಾರಿ ನಡೆಯುತ್ತಿದೆ. ಯೋಜನೆ ಕಾರ್ಯಗತಕ್ಕೆ ಹತ್ತಿರ ಬಂದಾಗ ನಿಂತಿದೆ. ಕೇವಲ 400 ಕೋಟಿ ರೂ. ನೀಡಲು ಸಬೂಬು ಏಕೆ? ರೈತರ ಭೂ ಸ್ವಾಧೀನಕ್ಕೆ ಹಣ ನೀಡಲು ಯಾಕೆ ತಡೆ? ಎಲ್ಲವೂ ಆಗಿದೆ, ಮೊದಲು ಅದನ್ನು ಸರಿಪಡಿಸಿ ಎಂದು ಶಾಸಕ ರಮೇಶ್‌ಕುಮಾರ್ ಸಹ ಆಗ್ರಹಿಸಿದರು.
Key words: Discussion – ettinahole project – state –assembly-Minister -Madhuswamy –G.Parameshwar