ಬೆಂಗಳೂರು,ಜು,22,2019(www.justkannada.in): ಅಧಿಕಾರದಲ್ಲಿರುವ ಶಾಸಕರಿಗೆ ಹಣ ಅಧಿಕಾರದ ಆಮಿಷ ಒಡ್ಡಿ ಮುಂಬೈನಲ್ಲಿಟ್ಟಿದ್ದೀರಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಲ್ಲವೇ..? ಎಂದು ಬಿಜೆಪಿ ವಿರುದ್ದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ವಿಧಾನಸಭೆ ಕಲಾಪದಲ್ಲಿ ಇಂದು ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಅಂದು ನಾನು ಜೆಡಿಎಸ್ ಪಕ್ಷ ಬಿಡಲಿಲ್ಲ. ನನ್ನನ್ನ ಉಚ್ಛಾಟನೆ ಮಾಡಿದರು. ಡಿಸಿಎಂ ಸ್ಥಾನದಿಂದ ನನ್ನನ್ನ ಡಿಸ್ ಮಿಸ್ ಮಾಡಿದ್ರು. ಆದರೆ 2006ರರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ ಎಂದು ತಿಳಿಸಿದರು.
ತಾವು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿದ್ದ ಕುರಿತು ಬಿಜೆಪಿ ಮಾಡಿದ್ದ ಟೀಕೆಗೆ ಸಿದ್ಧರಾಮಯ್ಯ ಉತ್ತರ ನೀಡಿದರು. ಮಧ್ಯಾಹ್ನ ವಿಧಾನಸಭಾ ಕಲಾಪ ಆರಂಭಕ್ಕೂ ಮುನ್ನ ಮಾಧ್ಯಮದ ಜತೆ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ನಾಳೆ ಸುಪ್ರೀಂಕೋರ್ಟ್ ನಲ್ಲಿ ಪಕ್ಷೇತರ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ. ವಿಪ್ ವಿಚಾರವಾಗಿ ಸಲ್ಲಿಸಿದ ಅರ್ಜಿಯೂ ನಾಳೆ ವಿಚಾರಣೆಗೆ ಬರಲಿದೆ. ಸುಪ್ರೀಂಕೋರ್ಟ್ ನಲ್ಲಿ ಏನಾಗುತ್ತೆ ನೋಡಬೇಕು. ನಮ್ಮ ಶಾಸಕರು ಬಂದ್ರೆ ನಮಗೆ ವೋಟ್ ಹಾಕ್ತಾರೆ ಎಂದರು.
Key words: CLP leader -Siddaramaiah – against – BJP-session