ರಾಜೀವ್ ಗಾಂಧಿ ಆರೋಗ್ಯ ವಿವಿ ಸರ್ಚ್ ಕಮಿಟಿಗೆ ಎಂಜಿನಿಯರ್ ಓದಿರುವ ಪ್ರೊ.ಎಸ್.ವಿದ್ಯಾಶಂಕರ್ ನೇಮಕವೇಕೆ..?

ಮೈಸೂರು,ಸೆಪ್ಟಂಬರ್,20,2021(www.justkannada.in):  ರಾಜೀವ್ ಗಾಂಧಿ ಆರೋಗ್ಯ ವಿವಿ ಸರ್ಜ್ ಅಂಡ್ ಸೆಲೆಕ್ಷನ್ ಕಮಿಟಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರನ್ನು ನೇಮಕ ಮಾಡಿರುವುದ್ದಕ್ಕೆ ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷ  ಪ್ರೊ.ಕೆ.ಎಸ್.ರಂಗಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾಮುವಿವಿ ಕುಲಪತಿಗಳು ಎಂಜಿನಿಯರಿಂಗ್ ಹಿನ್ನೆಲೆ ಹೊಂದಿದ್ದಾರೆ. ಅವರಿಗೂ ರಾಜೀವ್ ಗಾಂಧಿ ಆರೋಗ್ಯ ವಿವಿಗೂ ಏನು ಸಂಬಂಧ. ಯಾವುದೇ ವಿವಿಯ ಸರ್ಚ್ ಕಮಿಟಿಗೆ ನೇಮಕ ಮಾಡುವ ಮುನ್ನ ಆಯಾ ಕ್ಷೇತ್ರದ ಪರಿಣಿತರನ್ನೇ ಆಯ್ಕೆ ಮಾಡಬೇಕು. ಈ ಬಗ್ಗೆ ರಾಜ್ಯಪಾಲರು ಹಾಗೂ ಸಿಎಂಗೆ ಪತ್ರ ಬರೆದಿದ್ದು, ನೇಮಕ ಆದೇಶಕ್ಕೆ ತಡೆ ನೀಡಬೇಕೆಂದು ಒತ್ತಾಯಿಸಿಲಾಗಿದೆ ಎಂದರು.

ಹಾಲಿ ಕುಲಪತಿಗಳು ಬೇಡ.

ಈಗಾಗಲೇ ಇರುವ ಹಾಲಿ ಕುಲಪತಿಗಳನ್ನು ಸರ್ಚ್ ಕಮಿಟಿಗೆ ನೇಮಕ ಮಾಡುವ ಪ್ರವೃತಿಯನ್ನು ಕೈಬಿಡಬೇಕು. ಹಾಲಿ ಕುಲಪತಿಗಳಾದರೇ ಅವರಿಗೆ ನಿಷ್ಪಕ್ಷಪಾತವಾಗಿ ತೀರ್ಮಾನಗಳನ್ನ ತೆಗೆದುಕೊಳ್ಳಲಾಗದು. ಅವರು ಸರ್ಕಾರದ ಮರ್ಜೆಯಲ್ಲೇ ಇರುತ್ತಾರೆ. ಅದ್ದರಿಂದ ಕುಲಪತಿಗಳ ಆಯ್ಕೆ ಸಮಿತಿಗೆ ವಿಶ್ರಾಂತ ಕುಲಪತಿಗಳನ್ನೇ ನೇಮಕ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾನೂನು ರೂಪಿಸಬೇಕಿದೆ ಎಂದು ಪ್ರೊ. ರಂಗಪ್ಪ ಸಲಹೆ ನೀಡಿದರು.

ಮುಂದಿನ ವಾರದಲ್ಲಿ ಪತ್ರಿಕಾಗೋಷ್ಠಿ…

ಕರಾಮುವಿವಿ ಅಕ್ರಮಗಳ ಬಗ್ಗೆ ದಾಖಲೆ ಸಂಗ್ರಹ ಮಾಡುತ್ತಿದ್ದೇನೆ. ಮುಂದಿನ ವಾರದಲ್ಲಿ ಸುದ್ದಿಗಾರರೊಂದಿಗೆ ದಾಖಲೆ ಸಮೇತ ಮಾತನಾಡುತ್ತೇನೆ. ನಾನು ವಿಸಿಯಾಗಿದ್ದಾಗ 650 ಕೋಟಿ ಆದಾಯ ಸಂಗ್ರಹ ಮಾಡಿಟ್ಟು ಹೊರಗೆ ಬಂದಿದ್ದೆ. ಆದರೆ, ಕೊನೆಗೆ ನನ್ನನ್ನೇ ವಿಲನ್ ಮಾಡಿದರು. ಹಾಗಾಗಿ ಸದ್ಯ ಈ ಬಗ್ಗೆ ಹೆಚ್ಚಿಗೆ ಏನು ಮಾತನಾಡುವುದಿಲ್ಲ ಎಂದರು.

Key words: Rajiv Gandhi Health –university-search Committee- appointed -Prof. S. Vidyashankar-Prof.Rangappa

ENGLISH SUMMARY…

Why Prof. S. Vidyashankar, who is an engineering graduate is appointed for the Rajiv Gandhi Health University Search Committee?
Mysuru, September 20, 2021 (www.justkannada.in): The Karnataka State Former Vice-Chancellors’ Forum Chairman Prof. K.S. Rangappa has opposed appointing Prof. S. Vidyashankar as a member of the Search Committee of the Rajiv Gandhi University of Health Sciences.
Addressing a press meet held in Mysuru today, he informed that the KSOU Vice-Chancellor is from an engineering background and questioned in what way he is concerned with the Rajiv Gandhi University of Health Sciences? “Before selecting a person for any University Search Committee, experts from the relevant sector should be consulted,” he said and informed that he has written a letter to the Hon’ble Governor of Karnataka and the Chief Minister demanding to withdraw the orders.
He also informed, “the trend of appointing the present vice-chancellors to the search committee should be stopped. as they can’t take unbiased decisions, and will always be under government pressure. Hence, the government should come up with a policy on appointing former VCs to the search committee,” he opined.
“I am collecting all the relevant documents about the corruption that is taking place in KSOU. I will come before the media in the next week along with the documents. I had accumulated a sum of Rs. 650 crore funds when I was the Vice-Chancellor. But they made me the villain. I won’t speak much about it now,” he added.
Keywords: RGUHS/ search committee/ Prof. S. Vidyashankar/ Engineering graduate