ನವದೆಹಲಿ:ಜುಲೈ-22:(www.justkannada.in) ಜೀರಿಗೆ ನೀರು ಸೇವನೆ ತೂಕ ಇಲಿಸಲು ಅತ್ಯಂತ ಸಹಾಯಕಾರಿಯಾದ ಒಂದು ವಿಧಾನ. ಮಸಲಾ ಪದಾರ್ಥಗಳಲ್ಲಿ ಒಂದಾದ ಜೀರಿಗೆ ತೂಕ ಕಡಿಮೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ.
ಭಾರತೀಯ ಅಡುಗೆ ಮನೆಗಳಲ್ಲಿ ಜೀರಿಗೆ ಸರ್ವೇ ಸಾಮಾನ್ಯವಾಗಿ ಕೈಗೆಟಕುವ ವಸ್ತು. ದಿನನಿತ್ಯದ ಅಡುಗೆಯಲ್ಲಿ ಜೀರಿಗೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈ ಜೀರಿಗೆಯನ್ನು ನಿಯಮಿತವಾಗಿ ನಿರ್ಧಿಷ್ಟ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ ತೂಕ ಇಳಿಕೆ ಮಾಡುವುದರಲ್ಲಿ ಸಂಶಯವಿಲ್ಲ.
ಜೀರಿಗೆ ಕ್ಯಾಲೊರಿ ಕಡಿಮೆ ಮತ್ತು ಆಂಟಿಆಕ್ಸಿಡೆಂಟ್ಗಳಿಂದ ತುಂಬಿದ್ದು ತೂಕ ನಷ್ಟವನ್ನು ವೇಗಗೊಳಿಸುತ್ತದೆ. ಹೊಟ್ಟೆಯ ಕೊಬ್ಬನ್ನು ನಿಗ್ರಹಿಸಲು ಮತ್ತು ಬೊಜ್ಜು ನಿಯಂತ್ರಿಸಲು ಜೀರಿಗೆ ನೀರು ಅದ್ಭುತ ಪಾನೀಯವಾಗಿದೆ. ಜೀರಿಗೆ ನೀರು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಲ್ಲದೇ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಕರುಳಿನ ಚಲನೆಯನ್ನು ಸುಧಾರಿಸುತ್ತದೆ.
ಒಂದು ಚಮಚ ಜೀರಿಗೆ ಪುಡಿಯನ್ನು ಒಂದು ಗ್ಲಾಸ್ ನೀರಿಗೆ ಬೆರೆಸಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಈ ಸುಲಭ ವಿಧಾನವನ್ನು ಪ್ರತಿನಿತ್ಯ ಅನುಸರಿಸುವುದರಿಂದ ತೂಕವನ್ನು ವೇಗವಾಗಿ ಕಡಿಮೆ ಮಾಡಿಕೊಳ್ಳಬಹುದು.