ಬೆಂಗಳೂರು,ಜು,23,2019(www.justkannada.in): ಅತೃಪ್ತ ಶಾಸಕರು ಬಿಜೆಪಿಗೆ ಸೇರಲ್ಲ. ಅವರಿಗೆ ಮಂತ್ರಿಗಿರಿ ಕೊಡಲ್ಲ ಎಂದುಬಿಡಿ. ನಾವು ಯಾವುದೇ ಚರ್ಚೆಗೆ ಹೋಗದೇ ಸಿಎಂರನ್ನ ಈಗಲೇ ಕರೆತಂದು ವಿಶ್ವಾಸಮತಯಾಚನೆ ಮಾಡ್ತೇವೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ವಿಧಾನಸಭೆ ಕಲಾಪದಲ್ಲಿ ಚರ್ಚೆ ವೇಳೆ ದಿನನಿತ್ಯ ರಾಜೀನಾಮೆ ನೀಡಿದ ಶಾಸಕರ ಬಗ್ಗೆಯೇ ಮಾತನಾಡುತ್ತೀರಿ. ನಿಮ್ಮ ಮನೆಯಲ್ಲಿ ಅದರ ಬಗ್ಗೆ ಮಾತನಾಡಿಕೊಳ್ಳಿ. ದಿನನಿತ್ಯ ಸದನದಲ್ಲೇಕೆ ಚರ್ಚೆ ಮಾಡುತ್ತೀರಿ. ನಿತ್ಯ ಹೇಳಿದ್ದನ್ನೇ ಹೇಳುತ್ತೀರಿ…? ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಹೇಳಿದರು.
ಮಾಧುಸ್ವಾಮಿ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಶಾಸಕ ಶೀವಲಿಂಗೇಗೌಡ, ನನ್ನ ಶಾಸಕರನ್ನ ನೀವೇ ಹಾಳು ಮಾಡಿದ್ದೀರಿ. ರಾಜೀನಾಮೆ ನೀಡಿದ ಶಾಸಕರು ಬಿಜೆಪಿಗೆ ಬರಲ್ಲ. ಅವರಿಗೆ ಮಂತ್ರಿ ಸ್ಥಾನ ಕೊಡಲ್ಲ ಎಂದು ಹೇಳುಬಿಡಿ. ಈ ಬಗ್ಗೆ ಇಂದೇ ನಿರ್ಧಾರವಾಗಲಿ. ನಾವು ಚರ್ಚೆಗೆ ಹೋಗದೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಕರೆತಂದು ಮತಕ್ಕೆ ಹಾಕುತ್ತೇವೆ. ಮುಂದೇ ಏನು ಉದ್ದಾರ ಮಾಡುತ್ತೀರೋ ನಾವು ನೋಡುತ್ತೇವೆ. ನಿಮ್ಮ ಆಟವನ್ನ ಈಗಾಗಲೇ ಜನ ನೋಡಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಯುಟಿ ಖಾದರ್ , ಶಿವಲಿಂಗೇಗೌಡರ ಮಾತನ್ನ ಒಪ್ಪುತ್ತೇನೆ. ನೀವು ಗುಟ್ಟನ್ನೇಕೆ ಮುಚ್ಚಿಟ್ಟಿದ್ದೀರಿ. ಈ ಬಗ್ಗೆ ವಿಪಕ್ಷದ ನಾಯಕರು ಸ್ಪಷ್ಟನೆ ಕೊಡಲಿ ಎಂದು ಆಗ್ರಹಿಸಿದರು.
Key words: rebel-MLAs -BJP – not joining- jds-challenge- assembly