ಮೈಸೂರು,ಸೆಪ್ಟಂಬರ್,25,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿದ್ದು, ಈ ಬೆನ್ನಲ್ಲೆ ಇದೀಗ ಇಂದಿನಿಂದಲೇ ಮೈಸೂರು ಅರಮನೆ ಪ್ರವೇಶ ಟಿಕೆಟ್ ದರವನ್ನ ಏರಿಕೆ ಮಾಡಲಾಗಿದೆ.
ಅಗತ್ಯ ವಸ್ತುಗಳ ದರ ಏರಿಕೆ ಬೆನ್ನಲ್ಲೆ ಅರಮನೆ ಪ್ರವೇಶ ಟಿಕೆಟ್ ದರವನ್ನ ಅರಮನೆ ಮಂಡಳಿ ಹೆಚ್ಚಳ ಮಾಡಿದೆ. ಅರಮನೆ ಪ್ರವೇಶ ದರ 70 ರೂ. ನಿಂದ 100 ರೂ.ಗೆ ಏರಿಕೆಯಾಗಿದೆ. ಪೋಷಕರ ಜೊತೆ ಆಗಮಿಸುವ ಮಕ್ಕಳಿಗೆ ಹಳೇಯ ದರ 30 ರೂ. ಇತ್ತು ಈಗ ಮಕ್ಕಳಿಗೆ ಹೊಸ ದರ 50 ರೂ ಮಾಡಲಾಗಿದೆ.
ಶಾಲಾ ಮಕ್ಕಳಿಗೆ ಹಳೆಯ ದರ 20 ರೂ ಹೊಸ ದರ 50ರೂ ಆಗಿದೆ. ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂಗೆ ನಿಗದಿ ಮಾಡಲಾಗಿದೆ. ಕೊರೋನಾ ಲಾಕ್ ಡೌನ್ ನಿಂದ ಅರಮನೆ ಮಂಡಳಿಯ ಆದಾಯ ಕುಸಿತ ಕಂಡಿತ್ತು.
Key words: Mysore -Palace -Admission -Ticket –Rate- increase
ENGLISH SUMMARY….
Mysuru Palace entrance ticket fare increased from today
Mysuru, September 25, 2021 (www.justkannada.in): The ticket fare of the world-famous Ambavilasa Palace has been increased from today even as the Mysuru Dasara celebrations are fast approaching.
The Palace authorities have increased the entrance ticket fare increasing the burden of the visitors and the tourists who are already facing troiuble due to the steep increase in the prices of all essential commodities across the country. Accordingly, the entrance ticket fare that was earlier Rs.70 has now been increased to Rs. 100 per head. The ticket fare for children who are accompanied by their parents was earlier Rs. 30, which is increased to Rs. 50.
The ticket fare for the school children, which was earlier Rs.20 is increased to Rs.50 per head. The fare of the Kannada sound and light program has not been increased. However, the ticket fare of the English Sound and Light program has been fixed at Rs. 120 per head. The income of the palace authorities had reduced from the last one-and-a-half year due to the Corona lockdown.
Keywords: Mysuru Dasara/ Ambavilasa Palace/ entrance ticket fare/ increased