ಬೆಂಗಳೂರು, ಸೆಪ್ಟೆಂಬರ್ 26, 2021 (www.justkannada.in): ಅಮೆರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಮನ್ ಕೀ ಬಾತ್ ಸರಣಿಯ 81ನೇ ಸಂಚಿಕೆಯಲ್ಲಿ ಮೋದಿ, ನದಿಗಳ ಮಹತ್ವದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ. ಇಂದು ‘ವಿಶ್ವ ನದಿಗಳ ದಿನ’ವಾಗಿದ್ದರಿಂದ ಮೋದಿ ನದಿಗಳ ಬಗ್ಗೆ ಮಾತನಾಡಿದ್ದಾರೆ.
ನದಿಗಳು ನಮಗೆ ನಿಸ್ವಾರ್ಥವಾಗಿ ನೀರನ್ನು ಕೊಡುತ್ತೆವೆ. ನಾವು ಅದನ್ನು ಸ್ಮರಿಸಿಕೊಳ್ಳಬೇಕು. ಹನಿ ಹನಿ ನೀರು ಸಹ ಬಹಳ ಮುಖ್ಯವಾದದ್ದು. ನದಿಗಳ ದಂಡೆಯ ಮೇಲೆ ವಾಸಿಸುವ ಜನರು ವರ್ಷಕ್ಕೆ ಒಮ್ಮೆ ನದಿ ಉತ್ಸವ ಆಚರಣೆ ಮಾಡಬೇಕು ಎಂದು ಮೋದಿ ಹೇಳಿದ್ದಾರೆ.
key words: Modi talks about river festival at ‘Mann Ki Baat’