ಮೈಸೂರು ದಸರಾ ವೆಬ್ ಸೈಟ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ.

ಮೈಸೂರು,ಅಕ್ಟೋಬರ್,1,2021(www.justkannada.in):   ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿರುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತಯಾರಿ ನಡೆಸಲಾಗುತ್ತಿದ್ದು ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್  ದಸರಾ ವೆಬ್ ಸೈಟ್ ಗೆ ಚಾಲನೆ ನೀಡಿದರು.

ವೆಬ್ ಸೈಟ್ ದಸರಾ ಸಂಬಂಧ ಸಂಪೂರ್ಣ ಮಾಹಿತಿ ಒದಗಿಸಲಿದ್ದು, ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಹಿನ್ನೆಲೆ, ವರ್ಚುವಲ್ ಹಾಗೂ ನೇರ ಪ್ರಸಾರಗಳು ವೆಬ್ ಸೈಟ್ ನಲ್ಲಿ ಲಭ್ಯವಿರಲಿದೆ. ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ನಂದಿಪೂಜೆ, ಜಂಬೂಸವಾರಿ ಮೆರವಣಿಗೆ ನೇರ ಪ್ರಸಾರವಾಗಲಿದೆ.

ದಸರಾ ಕಾರ್ಯಕ್ರಮಗಳ ವಿವರ, ವೇಳಾಪಟ್ಟಿ, ಉಪಸಮಿತಿ ವಿವರ, ಛಾಯಾಚಿತ್ರಗಳ ಮಾಹಿತಿ ವೆಬ್ ಸೈಟ್ ನಲ್ಲಿ ಲಭ್ಯವಿರಲಿದ್ದು. ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಮಾಹಿತಿ ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ಸಭಾಂಗಣದಲ್ಲಿ ಇಂದು ಸಚಿವ ಎಸ್.ಟಿ ಸೋಮಶೇಖರ್ ವೆಬ್ ಸೈಟ್ ಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಈ ಬಾರಿಯೂ ದಸರಾ ಗೋಲ್ಡ್ ಕಾರ್ಡ್, ಸಿಲ್ವರ್ ಕಾರ್ಡ್ ಯಾವುದೂ ಇಲ್ಲ. ಸದ್ಯಕ್ಕೆ ಕಾರ್ಯಕ್ರಮದ ವೀಕ್ಷಣೆಗೆ ಹೆಚ್ಚಿನ ಜನರಿಗೆ ಅವಕಾಶ ಕೊಡಲು ಕೇಳಿದ್ದೇವೆ. ಇನ್ನೂ ಅದಕ್ಕೆ ನಮಗೆ ಯಾವ ಉತ್ತರವೂ ಬಂದಿಲ್ಲ. ಅದರ ನಿರೀಕ್ಷೆಯಲ್ಲೇ ಇದ್ದೇವೆ‌ ಎಂದರು.

Key words: minister -ST Somashekhar -Mysore Dasara -web site.

ENGLISH SUMMARY…

Mysuru District In-charge Minister S.T. Somashekar launches Mysuru Dasara Website
Mysuru, October 1, 2021 (www.justkannada.in): The Mysuru District Administration is making all necessary preparations for the world-famous Mysuru Dasara Mahotsav celebrations. The Mysuru District In-charge Minister S.T. Somashekar today launched the Mysuru Dasara Website.
The website provides complete details about the Dasara programs. As this year’s Dasara is celebrated in a simple manner necessary arrangements have been made to telecast the programs online on the website. All the programs that take place inside the palace premises including the cultural programs, Nandi puja, Jamboo Savari, etc. will be aired live online.
Other details like the Dasara program timings, details, sub-committee details, etc., are available on this website, which is available both in English and Kannada languages.
Speaking on the occasion, Minister S.T. Somashekar informed that this time there is no ‘Dasara Gold Card, Silver Card. “We are making efforts to provide an opportunity for more people to watch the program, however, it is still not finalized.”
Keywords: Mysuru District In-charge Minister/ S.T. Somashekar/ Mysuru Dasara/ Dasara Website/ launches