ಮೈಸೂರು,ಅಕ್ಟೋಬರ್,1,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದಿನಿಂದ ಅಂತಿಮ ಹಂತದ ತಾಲೀಮು ಆರಂಭವಾಗಿದೆ.
ಅಕ್ಟೋಬರ್ 15 ರಂದು ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಕ್ಯಾಪ್ಟನ್ ಅಭಿಮನ್ಯು 750ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ. ಈ ಹಿನ್ನೆಲೆಯಲ್ಲಿ ಇಂದು ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು.
ಅರಮನೆ ಅಂಗಳದಲ್ಲಿ ಮೊದಲು ಮರದ ಅಂಬಾರಿಗೆ ಡಿಸಿಎಪ್ ಕರಿಕಾಳನ್ ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಈ ಮಧ್ಯೆ ಮರದ ಅಂಬಾರಿ ತಾಲೀಮಿನ ಸಿದ್ದತೆ ಪರಿಶೀಲಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಗೆ ಜಿಲ್ಲಾಧಿಕಾರಿ ಬಗಾದಿ ಗೌತಮ್, ಶಾಸಕ ಎಲ್ ನಾಗೇಂದ್ರ ಹಾಗೂ ಸ್ಥಳೀಯ ಮುಖಂಡರು ಸಾಥ್ ನೀಡಿದರು. ನಂತರ ಮರದ ಅಂಬಾರಿ ತಾಲೀಮಿಗೆ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಿದರು. ಆನೆಗಳಿಗೆ ಫಲತಾಂಬೂಲ ನೀಡಿ, ಪುಷ್ಪಾರ್ಚನೆ ಮಾಡಿದರು.
ಮರದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕಿದನು. ಅಭಿಮನ್ಯು ಜತೆ ಸಾಥ್ ನೀಡಿ ಕಾವೇರಿ, ಚೈತ್ರಾ, ಲಕ್ಷ್ಮಿ ಸಹ ಹೆಜ್ಜೆ ಹಾಕಿದ್ದು ಗೋಪಾಲಸ್ವಾಮಿ, ಧನಂಜಯ, ಅಶ್ವತ್ಥಾಮ ವಿಕ್ರಮ ಸಾಥ್ ನೀಡಿದರು.
Key words: Mysore Dasara -Captain Abhimanyu- stepped –tree ambari
ENGLISH SUMMARY….
Mysuru Dasara: Captain Abhimanyu rehearsals with the golden howdah on its back
Mysuru, October 1, 2021 (www.justkannada.in): The preparations for the world-famous Mysuru Dasara Mahotsav are going on in full swing in Mysuru. Abhimanyu, which is going to captain this year’s jamboo savari participated in the rehearsals carrying the golden howdah on its back weighing 750 kg.
The Jamboo Savari will be held on October 17, on Vijayadashami day. The rehearsals have begun for the final procession day.
DCF Karikalan performed the traditional pooja to the golden howdah inside the palace premises today. Mysuru District In-charge Minister S.T. Somashekar who witnessed the rehearsals was earlier welcomed by Deputy Commissioner Bagadi Gowtham, MLA L. Nagendra, and local leaders.
Keywords: Mysuru Dasara/ Jamboo Savari rehearsal/ golden howda/ Abhimanyu