ಮೈಸೂರು,ಜು,24,2019(www.justkannada.in): ಕಡ್ಡಾಯ ವರ್ಗಾವಣಾ ನೀತಿ ಖಂಡಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಕಡ್ಡಾಯ ವರ್ಗಾವಣೆ ಶಿಕ್ಷಕರ ವೇದಿಕೆ ವತಿಯಿಂದ ಶಿಕ್ಷಕರು ಪ್ರತಿಭಟನೆ ನಡೆಸಿದರು.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಛೇರಿ ಮುಂಭಾಗದಲ್ಲಿ ಶಿಕ್ಷಕರು ಧರಣಿ ನಡೆಸುತ್ತಿದ್ದು. ಕಡ್ಡಾಯ ವರ್ಗಾವಣೆ ಎಂಬುದು ಶಿಕ್ಷಕರ ಪಾಲಿನ ಕರಾಳ ಶಾಸನ. ಇದೊಂದು ಅವೈಜ್ಞಾನಿಕ ನೀತಿಯಾಗಿದೆ. ಪತಿ ಪತ್ನಿ ಪ್ರಕರಣದಲ್ಲಿ ಶಿಕ್ಷಕರಲ್ಲಿ ತಾರಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹಾಗೆಯೇ ಸರ್ಕಾರಿ ನೌಕರರಲ್ಲದ ಶಿಕ್ಷಕರು ವಿನಾಯಿತಿಗೆ ಅರ್ಹರು ಎಂಬುದು ಅವೈಜ್ಞಾನಿಕ. ಟಿ ಡಿಎಸ್ ಮಾಹಿತಿ ಕೂಡ ಅಪೂರ್ಣವಾಗಿದೆ. ಎಬಿಸಿ ವಲಯ ಗುರುತಿಸಿ ಕಡ್ಡಾಯ ವರ್ಗಾವಣೆ ಮಾಡುವುದರಿಂದ ಶಿಕ್ಷಕರಿಗೆ ಅನ್ಯಾವಾಗುತ್ತಿದೆ ಎಂದು ಆರೋಪಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದರು.
Key words: Teacher -protests – Mysore- -compulsory -transfer -policy