ಅ.21ರಿಂದ ಬಿಸಿಯೂಟ ಪ್ರಾರಂಭ: ದಸರಾ ಬಳಿಕ 1ರಿಂದ 5ನೇ ತರಗತಿ ಆರಂಭಕ್ಕೆ ಸಿದ್ಧತೆ- ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ಬೆಂಗಳೂರು,ಅಕ್ಟೋಬರ್,11,2021(www.justkannada.in):  ರಾಜ್ಯದಲ್ಲಿ 6 ರಿಂದ ಮೇಲ್ಪಟ್ಟ ತರಗತಿಗಳು ಆರಂಭವಾಗಿದ್ದು ಈ ಮಧ್ಯೆ ಕಿರಿಯ ಪ್ರಾಥಮಿಕ ತರಗತಿಗಳು ಆರಂಭವಾಗಬೇಕಿದೆ. ಈ ಕುರಿತು ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ದಸರಾ ಬಳಿಕ 1ರಿಂದ 5ನೇ ತರಗತಿ ಆರಂಭಕ್ಕೆ ಸಿದ್ಧತೆ ನಡೆಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸುದ್ಧಿಗೋಷ್ಠಿ ನಡೆಸಿ ಎಸ್.ಎಸ್ ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಬಳಿಕ ಮಾತನಾಡಿದ ಸಚಿವ ಬಿ.ಸಿ ನಾಗೇಶ್, ದಸರಾ ನಂತರ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಶಾಲೆಗಳ ಆರಂಭ ಕುರಿತಂತೆ ಚರ್ಚಿಸಲಾಗುತ್ತದೆ. 1 ರಿಂದ 5ನೇ ತರಗತಿ ಆರಂಭಕ್ಕೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಬಳಿ ಅನುಮತಿ ಕೇಳುತ್ತೇವೆ. ಅನುಮತಿ ನೀಡಿದಿದ್ದರೇ 3 ರಿಂದ 5ನೇ ತರಗತಿ ಆರಂಭಕ್ಕೆ ಅನುಮತಿ ಕೇಳುತ್ತೇವೆ ಅನುಮತಿ ನೀಡಿದರೇ ಶಾಲೆ ಆರಂಭಿಸುತ್ತೇವೆ ಎಂದರು.

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಕು ಕುರಿತು ಮಾತನಾಡಿದ ಸಚಿವ ಬಿ.ಸಿ ನಾಗೇಶ್, ಅಕ್ಟೋಬರ್ 20ರವರೆಗೆ ಶಾಲೆಗಳಿಗೆ ದಸರಾ ರಜೆಯಿದೆ. ಅಕ್ಟೋಬರ್ 21ರಿಂದ ಮಧ್ಯಾಹ್ನದ ಬಿಸಿಯೂಟ  ಪುನರಾರಂಭಿಸಲಾಗುತ್ತದೆ ಎಂದು ತಿಳಿಸಿದರು.

ಶುಲ್ಕ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ ನಾಗೇಶ್, ಬೇರೆ ರಾಜ್ಯಗಳಲ್ಲಿ ಶುಲ್ಕ ತಡೆ ಸಮಿತಿ ಇದೆ. ಹಾಗೆಯೇ ರಾಜ್ಯದಲ್ಲೂ ಸಮಿತಿ ರಚಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ. ಸಮಿತಿ ರಚನೆ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗುತ್ತದೆ. ಬೇರೆ ರಾಜ್ಯಗಳ  ಶುಲ್ಕ ಮಾದರಿ ವರದಿ ನೀಡುವಂತೆ ಕೇಳಿ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Key words: Preparing – start – 1st to 5th– grade- after-dasara-Education Minister- BC Nagesh.

ENGLISH SUMMARY…

Midday meals to begin in schools from Oct. 21: Education Minister B.C. Nagesh hints on commencement of 1st to 5th standards after Dasara
Bengaluru, October 11, 2021 (www.justkannada.in): Primary and Secondary Education Minister B.C. Nagesh has informed that all preparations are being made to commence the primary schools from 1st to 5th standards after the Dasara festival.
Addressing a press meet in Bengaluru today he informed that a technical committee meeting will be held after the Dasara festival to discuss commencing the primary classes in schools. “We will request the technical committee to give us permission to start the classes. If they refuse we have decided to ask them to allow atleast to start the classes from 3rd to 5th standard,” he said.
He also informed that the midday meal program would be recommenced after October 21, as the schools are closed till October 20 due to Dasara vacation.
In his response to the confusion over the school fees, the Minister replied that several parents are demanding to form a School Fee Regulation Committee like it is in other states. We are holding discussions about the same in our state and will take a decision regarding this after getting the fee model report from other states.
Keywords: Primary and Secondary Education Minister/ B.C. Nagesh/ school/ 1st to 5th standard/ commence after Dasara