ಮೈಸೂರು,ಅಕ್ಟೋಬರ್,13,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿ ಮೆರವಣಿಗೆಗೆ ಅಕ್ಟೋಬರ್ 15 ರಂದು ನಡೆಯಲಿದ್ದು, ಜಂಬೂ ಸವಾರಿ ಮೆರವಣಿಗೆಯಿಂದ ವಿಕ್ರಮನಿಗೆ ಕೋಕ್ ನೀಡಲಾಗಿದೆ.
ಜಂಬೂ ಸವಾರಿ ಮೆರವಣಿಗೆಯ ವೇಳೆ ಪ್ರಮುಖ ನಿಶಾನೆ ಆನೆಯಾಗಿ ವಿಕ್ರಮ ಭಾಗಿಯಾಗುತ್ತಿದ್ದನು. ವಿಕ್ರಮನಿಗೆ ಇನ್ನೂ ಮದ ಇಳಿಯದ ಹಿನ್ನಲೆ. ದಸರಾ ಜಂಬೂ ಸವಾರಿ ಮೆರವಣಿಗೆಯಿಂದ ವಿಕ್ರಮ ಸಂಪೂರ್ಣ ದೂರ ಉಳಿಯಲಿದ್ದಾನೆ. ವಿಕ್ರಮನ ಜೊತೆಯಲ್ಲಿ ಲಕ್ಷ್ಮೀ ಆನೆಗೂ ಕೋಕ್ ನೀಡಲಾಗಿದ್ದು ಈ ಬಾರಿ ದಸರೆಯಲಿ ೬ ಆನೆಗಳು ಮಾತ್ರ ಭಾಗಿಯಾಗಲಿವೆ. ರಾಜ ವಂಶಸ್ಥರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧನಂಜಯ ಮತ್ತು ಗೋಪಾಲಸ್ವಾಮಿ ಭಾಗಿಯಾಗಲಿದ್ದಾರೆ. ಬಳಿಕ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾನೆ. ಮೊದಲಬಾರಿಗೆ ಜಂಬೂ ಸವಾರಿಯಲ್ಲಿ ಅಶ್ವತ್ಥಾಮ ಭಾಗಿಯಾಗುತ್ತಿದ್ದು, ಕುಮ್ಕಿ ಆನೆಯಾಗಿ ಕಾವೇರಿ ಮತ್ತು ಚೈತ್ರ ಆನೆಗಳು ಭಾಗಿಯಾಗಲಿವೆ.
ದಸರಾ ಮೆರವಣಿಗೆಯಲ್ಲಿ ಗೋಪಾಲಸ್ವಾಮಿ ಆನೆ ಇರುತ್ತದೆ. ಶ್ರೀರಂಗಪಟ್ಟಣದಲ್ಲಿ ಆಗಿದ್ದು ಪಟಾಕಿ ಮತ್ತು ಕಲರ್ ಪೇಪರ್ ಕಣ್ಣಿಗೆ ಬಿದ್ದದ್ದರಿಂದ ಆದ ಘಟನೆ. ಗೋಪಾಲಸ್ವಾಮಿ 10 ವರ್ಷದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದಾನೆ. ಮೋಸ್ಟ್ ಎಕ್ಸ್ಪಿರಿಯನ್ಸ್ ಆನೆಯಾಗಿದೆ. ಒಂದು ಘಟನೆ ಇಟ್ಟುಕೊಂಡು ಆನೆಯನ್ನು ದೂರಲು ಸಾಧ್ಯವಿಲ್ಲ. ಜಂಬೂ ಸವಾರಿಯಲ್ಲಿ ಆರು ಆನೆಗಳು ಭಾಗವಹಿಸುತ್ತವೆ. ಮೊದಲ ಬಾರಿಗೆ ಬಂದಿರುವ ಅಶ್ವತ್ಥಾಮ ಭಾಗವಹಿಸುತ್ತಾನೆ. ನಗರ ಪ್ರದೇಶದ ವಾತಾವರಣಕ್ಕೆ ಹೊಸ ಆನೆಗಳು ಹೊಂದಿಕೊಂಡಿವೆ. ಗುರುವಾರ ಮಧ್ಯರಾತ್ರಿಯಿಂದಲೆ ಆನೆಗಳಿಗೆ ಅಲಂಕಾರ ಆರಂಭಿಸುತ್ತೇವೆ. ವಿಜಯದಶಮಿ ದಿನ ಮಧ್ಯಾಹ್ನ2.30 ಕ್ಕೆ ಅಂಬಾರಿ ಕಟ್ಟುವ ಕಾರ್ಯ ಶುರುವಾಗಲಿದೆ ಎಂದು ಮೈಸೂರಿನಲ್ಲಿ ಡಿಸಿಎಫ್ ಕರಿಕಾಳನ್ ಹೇಳಿದ್ದಾರೆ.
Key words: Vikrama-elephant- jumbo riding – Only- 6 elephants – involved