ಮೈಸೂರು,ಅಕ್ಟೋಬರ್,18,2021(www.justkannada.in): ನಾಳೆ ಮುಸ್ಲೀಂ ಬಾಂಧವರ ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದ್ದು, ಸರಳವಾಗಿ ಹಬ್ಬ ಆಚರಣೆಗೆ ಸೂಚನೆ ನೀಡಿದೆ.
ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಕೋವಿಡ ಹಿನ್ನೆಲೆ ಸರಳವಾಗಿ ಈದ್ ಮಿಲಾದ್ ಆಚರಣೆಗೆ ಸೂಚನೆ ನೀಡಿದ್ದಾರೆ. ಸಾಮೂಹಿಕ ಪ್ರಾರ್ಥನೆ, ಮೆರವಣಿಗೆಗೆ ನಿಷೇಧ ಹೇರಲಾಗಿದ್ದು, ಪರಸ್ಪರ ಹಸ್ತಲಾಘವ ಮತ್ತು ಆಲಿಂಗನಕ್ಕೆ ಅವಕಾಶ ಇಲ್ಲ. ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗರಿಷ್ಠ 100 ಮಂದಿ ಸೇರಲು ಮಾತ್ರ ಅವಕಾಶ ನೀಡಲಾಗಿದೆ.
ಮಸೀದಿ, ದರ್ಗಾಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಲು ಸೂಚಿಸಲಾಗಿದ್ದು, 60 ಕ್ಕಿಂತ ಮೇಲ್ಪಟ್ಟ ಮತ್ತು 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಡಿಸಿ ಬಗಾದಿ ಗೌತಮ್ ಸಲಹೆ ನೀಡಿದ್ದಾರೆ. ಹಾಗೆಯೇ ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ENGLISH SUMMARY….
Id Milad tomorrow: Mysuru District administration issues guidelines
Mysuru, October 18, 2021 (www.justkannada.in): The Mysuru District Administration has issued guidelines on the eve of the Id Milad festival and has requested the people for a simple celebration.
Mysuru District Deputy Commissioner Bagadi Gowtham, in his order, has urged the citizens to celebrate Id Milad festival in a simple manner. Prayers in public places and processions have been prohibited, along with shaking hands and hugging each other. Only 100 persons can take part in discourses and cultural programs.
Instructions have been given to maintain social distancing in mosques and dargahs. Senior citizens above 60 years of age and children below 10 years are asked to offer prayers in houses. The DC has also urged the people to wear masks and maintain social distancing compulsorily while offering prayers in public places and mosques.
Keywords: Id Milad/ tomorrow/ District Administration/ guidelines
Key words: Tomorrow – Eid Milad- festival-Guidelines – Mysore District.