ಬೆಂಗಳೂರು, ಅಕ್ಟೋಬರ್ 19, 2021 (www.justkannada.in): ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2021ರ ಟಿ-20 ವಿಶ್ವಕಪ್ನಲ್ಲಿ ಬ್ಯಾಟ್-ಟ್ರಾಕಿಂಗ್ ತಂತ್ರಜ್ಞಾನವನ್ನು ಪರಿಚಯಿಸಲಿದೆ.
ಹೌದು. ಇದೇ ಮೊದಲ ಬಾರಿಗೆ ಕ್ರಿಕೆಟ್ನಲ್ಲಿ ಬ್ಯಾಟ್ ಟ್ರಾಕಿಂಗ್ ವ್ಯವಸ್ಥೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ.
ಹಾಕ್-ಐ ಮೂಲಕ ಆಯ್ದ ಪಂದ್ಯಗಳಲ್ಲಿ ಈ ಸೇವೆ ಲಭ್ಯವಿದೆ. ಬಾಲ್ ಟ್ರಾಕಿಂಗ್ ಹಾಗೂ ತುದಿ ಪತ್ತೆ ಸೇವೆಗಳೊಂದಿಗೆ ಬ್ಯಾಟ್ ಟ್ರಾಕಿಂಗ್ ಅನ್ನೂ ತರಲಾಗುತ್ತಿದೆ.
ಕೇಬಲ್ ತಂತಿಗಳಿಗೆ ತಗುಲಿ ಹಾಕಲಾದ ಸ್ಪೈಡರ್ ಕ್ಯಾಮ್ ಹಾಗೂ ಇನ್ನಿತರ ಫೀಚರ್ಗಳನ್ನು ವೀಕ್ಷಕರು ಸವಿಯಬಹುದಾಗಿದೆ. 4ಡಿ ರೀಪ್ಲೇ ಮೂಲಕ ಬಹು ಕೋನದ ‘ಸ್ಪಿನ್ ಅರೌಂಡ್’ ರೀಪ್ಲೇ ಸರಣಿಗಳು ಆಯ್ದ ಪಂದ್ಯಗಳಿಗೆ ಲಭ್ಯವಿರಲಿದೆ.