ವಿಜಯಪುರ,ಅಕ್ಟೋಬರ್,19,2021(www.justkannada.in): ಹಾನಗಲ್ ಮತ್ತು ಸಿಂದಗಿ ಉಪಚುನಾವಣಾ ಕಣ ರಂಗೇರಿದ್ದು ಈ ಮಧ್ಯೆ ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ಮಾತನಾಡುವ ಬರದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆರ್.ಎಸ್.ಎಸ್. ಬಗ್ಗೆ ಆರೋಪ ಮಾಡುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರ್.ಎಸ್.ಎಸ್ ಶಾಖೆಗೆ ಬರಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆರ್ ಎಸ್ ಎಸ್ ಶಾಖೆಯಲ್ಲಿ ಕಲಿಸೋದು ನೀಲಿಚಿತ್ರ ನೋಡೋದಲ್ವೇ..? ಆರ್ ಎಸ್ ಎಸ್ ಶಾಖೆಯಲ್ಲಿ ಕಲಿತವರು ವಿಧಾನಸಭೆಯಲ್ಲಿ ಮಾಡಿದ್ದೇನು…? ಕಲಾಪ ನಡೆಯುವಾಗ ನೀಲಿ ಚಿತ್ರ ನೋಡೋದು..? ಇದನ್ನ ಕಲಿಯಲು ಆರ್ ಎಸ್ ಎಸ್ ಶಾಖೆಗೆ ಹೋಗಬೇಕಾ..? ಅಲ್ಲಿಗೆ ಹೋಗಿ ಬಂದವರು ಏನು ಮಾಡಿದ್ದಾರೆಂದು ಗೊತ್ತಿದೆ. ಅಯ್ಯೋ ನನಗೆ ದಯವಿಟ್ಟು ಆರ್ ಎಸ್ ಎಸ್ ಶಾಖೆ ಸಹವಾಸವೇ ಬೇಡವೇ ಬೇಡ. ಬಡವರ ಶಾಖೆಯಲ್ಲಿ ಕಲಿತಿದ್ದೇ ನನಗೆ ಸಾಕು ಎಂದು ಹೇಳಿಕೆ ನೀಡಿದ್ದಾರೆ.
ಆರ್.ಎಸ್.ಎಸ್. ಶಾಖೆಯಿಂದ ಕಲಿಸಿದ್ದನ್ನು ನೋಡಿದ್ದೇವಲ್ಲಾ.ವಿಧಾನಸೌಧದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ? ವಿಧಾನಸಭೆಯಲ್ಲಿ ಹೇಗಿರಬೇಕು ? ಎಂಬುದನ್ನು ಕಲಿಸಿದ್ದನ್ನು ಎಲ್ಲರೂ ನೋಡಿಲ್ಲವೇ ? ವಿಧಾನಸಭೆ ಕಲಾಪ ನಡೆಯುತ್ತಿದ್ದರೆ ನೀಲಿ ಚಿತ್ರ ನೋಡಿಕೊಂಡು ಕುಳಿತುಕೊಳ್ಳುವುದು… ಇಂಥದ್ದನ್ನೆ ಅಲ್ಲವೇ ಅವರ ಶಾಖೆಯಲ್ಲಿ ಕಲಿಸುವುದು ? ಅದನ್ನು ಕಲಿತುಕೊಳ್ಳಲು ನಾನು ಆರ್.ಎಸ್.ಎಸ್. ಶಾಖೆಗೆ ಹೋಗಲೇ ? ಎಂದು ಕಿಡಿಕಾರಿದರು.
Key words: learners – RSS -branch – assembly –HD Kumaraswamy