ಯಲ್ಲಾಪುರ,ಜು,25,2019(www.justkannada.in): ನಾವು ಅತೃಪ್ತ ಶಾಸಕರಲ್ಲ ಅಸಹಾಯಕರು. ನಮ್ಮ ನಿಲುವಿನಲ್ಲಿ ಯಾವುದೇ ರೀತಿ ಬದಲಾವಣೆ ಇಲ್ಲ. ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಸಮಸ್ಯೆಗಳು ಬಗೆ ಹರಿಯಲಿದೆ ಎಂದು ಅತೃಪ್ತ ಶಾಸಕರ ಶಿವರಾಂ ಹೆಬ್ಬಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಿವರಾಂ ಹೆಬ್ಬಾರ್, ಅತೃಪ್ತರೆಲ್ಲಾ ಒಟ್ಟಾಗಿದ್ದೇವೆ. ನಮ್ಮ ನಿಲುವಿನಲ್ಲಿ ಯಾವುದೇ ರೀತಿ ಬದಲಾವಣೆ ಇಲ್ಲ. ಮೂರ್ನಾಲ್ಕು ದಿನಗಳಖಲ್ಲಿ ಎಲ್ಲ ಸಮಸ್ಯೆ ಬಗೆ ಹರಿಯಲಿದೆ. ಸ್ಪೀಕರ್ ಮತ್ತು ಸುಪ್ರೀಂಕೋರ್ಟ್ ಮೇಲೆ ನಂಬಿಕೆ ಇದೆ. ರಾಜೀನಾಮೆ ಅಂಗೀಕಾರ ಬಳಿಕ ಮುಂದಿನ ನಿಲುವು ತಿಳಿಸುತ್ತೇವೆ ಎಂದರು.
ವೈಯಕ್ತಿಕ ಕೆಲಸ ಹಿನ್ನೆಲೆ ಯಲ್ಲಾಪುರಕ್ಕೆ ಬಂದಿದ್ದೇನೆ. ಯಲ್ಲಾ ಪುರ ಕ್ಷೇತ್ರಕ್ಕೆ 400ಕೋಟಿಗೂ ಅಧಿಕ ಹಣ ನೀಡಿರುವುದಾಗಿ ಹೆಚ್ ಡಿಕೆ ಹೇಳಿದ್ದಾರೆ. ಅಧಿಕಾರಿಗಳು ಬರೆದುಕೊಟ್ಟಿದ್ದನ್ನ ಅವರು ಹೇಳಿದ್ದಾರೆ ಎಂದು ಹೆಚ್ಡಿಕೆ ವಿರುದ್ದ ಗರಂ ಆದ ಶಿವರಾಂ ಹೆಬ್ಬಾರ್, ನಮಗೆ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಮಾತ್ರ ಅಸಮಾಧಾನವಿತ್ತು. ಸಿದ್ದರಾಮಯ್ಯ ನಮ್ಮ ನಾಯಕರಾಗಿದ್ದರು. ಆದ್ರೆ ಈಗ ಅವರೇ ನಮ್ಮ ನಾಯಕರಲ್ಲ ಎಂದಿದ್ದಾರೆ. ನಮ್ಮಲ್ಲಿ ಒಗ್ಗಟ್ಟಿದೆ. ಯಾವುದೇ ಬದಲಾವಣೆ ಇಲ್ಲ ಎಂದರು.
ನಾವು ಅತೃಪ್ತ ಶಾಸಕರಲ್ಲ. ಅಸಹಾಯಕರು. ನಮ್ಮ ಸಹಾಯಕ್ಕೆ ಯಾರು ಬಾರದ ಹಿನ್ನೆಲೆ ರಾಜೀನಾಮೆ ನೀಡಲು ನಿರ್ಧರಿಸಿದ್ದವು. ಹೀಗಾಗಿ ಅನರ್ಹತೆ ಬಗ್ಗೆ ನಮಗೆ ಭಯವಿಲ್ಲ. ಯುದ್ಧಕ್ಕೆ ಇಳಿದ ಮೇಲೆ ಏನು ಬೇಕಾದ್ರೂ ಹೆದರಿಸಲು ಸಿದ್ಧರಿದ್ದೇವೆ. ಉಮೇಶ್ ಜಾಧವ್ ರಾಜೀನಾಮೆ ಕೊಟ್ಟಾಗ ಅಂಗೀಕಾರವಾಗಿತ್ತು. ಅದ್ದರಿಂದ ನಮ್ಮ ರಾಜೀನಾಮೆ ಸಹ ಅಂಗೀಕಾರದ ವಿಶ್ವಾಸವಿದೆ ಎಂದು ಶಿವರಾಂ ಹೆಬ್ಬಾರ್ ತಿಳಿಸಿದರು.
Key words: We are- helpless -no change – our stance-Shivaram Hebbar -Yellapur