ಮೈಸೂರು,ಅಕ್ಟೋಬರ್,22,2021(www.justkananda.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚೆಗೆ ಮಳೆಯ ರುದ್ರನರ್ತನ ಜೋರಾಗಿದ್ದು, ಭೀಕರ ಮಳೆಯ ಆರ್ಭಟಕ್ಕೆ ಮೈಸೂರಿನ ಜನತೆ ನಲುಗಿದ್ದಾರೆ.
ಮಳೆಗಾಲದಲ್ಲಿ ಸ್ವಚ್ಛನಗರಿ ಮೈಸೂರು ಕೊಚ್ಚೆಯಂತಾಗುತ್ತಿದ್ದು, ಮುಂಬೈ, ರಾಜ್ಯ ರಾಜಧಾನಿ ಬೆಂಗಳೂರಿನ ಸಾಲಿಗೆ ಸೇರುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ. ಸತತ ವರ್ಷಧಾರೆಗೆ ಮೈಸೂರಿನ ಹೃದಯಭಾಗದ ಬಡಾವಣೆಗಳು ಕೆರೆಯಂತಾಗುತ್ತಿದ್ದು, ರಸ್ತೆಗಳು ತುಂಬಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗೆಯೇ ಮಳೆ ಬಂತೆದರೇ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಮಳೆರಾಯನ ಕೆಂಗಣ್ಣಿಗೆ ರಸ್ತೆ, ಚರಂಡಿಗಳು ನದಿಯಂತೆ ಉಕ್ಕಿಹರಿಯುತ್ತಿವೆ. ಧಾರಾಕಾರ ಮಳೆಯಿಂದಾಗಿ ಕೊಡಗಿನ ಮಾದರಿಯಲ್ಲೆ ಚಾಮುಂಡಿ ಬೆಟ್ಟ ಹಾಗೂ ನಗರದ ಮನೆಗಳು ಕುಸಿಯುತ್ತಿದ್ದು, ಹೀಗೆ ಮುಂದುವರೆದರೆ ಅರಮನೆ ನಗರಿಯ ಪಾರಂಪರಿಕ ಕಟ್ಟಡಗಳ ಗತಿಯೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ಧಿದೆ.
ಈ ನಡುವೆ ಬಿಬಿಎಂಪಿಯಂತೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರೋದ್ಯಾಕೆ..? ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿದೆ ರಾಜರು ಕಟ್ಟಿದ ಭವ್ಯ ನಾಡು. ಪಾಲಿಕೆ ಅಧಿಕಾರಿಗಳೇ ಇನ್ನಾದರೂ ಎಚ್ಚರಗೊಳ್ಳಿ. ವಿಶ್ವ ವಿಖ್ಯಾತ ಪ್ರವಾಸಿನಗರದ ಭವ್ಯತೆಯ ಕಾಪಾಡುವ ಹೊಣೆ ನಿಮ್ಮದು. ಸ್ಥಳೀಯ ಶಾಸಕರು, ಸಂಸದರು ಮಲ್ಲಿಗೆ ನಗರದ ಜನತೆಯ ನೆಮ್ಮದಿ ಬದುಕಿಗೆ ಸಹಕರಿಸಿ ಎಂದು ಮೈಸೂರು ಜನತೆ ಮನವಿ ಮಾಡಿದ್ದಾರೆ.
Key words: Mysore -heavy rains-feel -neglected – officer