ಇಂದು ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಿರುವ ಸಿಎಂ ಬೊಮ್ಮಾಯಿ.

ಬೆಳಗಾವಿ.ಅಕ್ಟೋಬರ್,23,2021(www.justkannada.in):  ಇಂದು ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಬೆಳ್ಳಿಹಬ್ಬದ ಸಂಭ್ರಮವಾಗಿದ್ದು ಇಂದು ಸಂಜೆ 7 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಇನ್ನು ಈ ಉತ್ಸವಕ್ಕೆ ಸಿಎಂ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪನಂಬಿಕೆ ಇದೆ. ಹೀಗಾಗಿ ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದು, ಈ ಮೂಲಕ ಮೌಢ್ಯ ನಿವಾರಣೆಗೆ ಮುಂದಾಗಿದ್ದಾರೆ.

1997ರಲ್ಲಿ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ್ದ ಅಂದಿನ ಸಿಎಂ ಜೆ.ಹೆಚ್.ಪಟೇಲ್ ಬಳಿಕ ಇಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಯಾರು ಸಹ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲು ಬಂದಿರಲಿಲ್ಲ.

2012ರ ಅಕ್ಟೋಬರ್ 25ರಂದು ಕಿತ್ತೂರು ಉತ್ಸವ ಸಮಾರೋಪ ಸಮಾರಂಭಕ್ಕೆ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಆಗಮಿಸಿದ್ದರು.  ಹಾಗೆಯೇ ಸಿಎಂ ಆಗಿದ್ದಾಗ ಬಿ.ಎಸ್.ಯಡಿಯೂರಪ್ಪ ಕಿತ್ತೂರು ಉತ್ಸವಕ್ಕೆ ಬಂದರೂ ಹೆದ್ದಾರಿ ಬದಿಯ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂಜೆ ನಡೆಯುವ ಉತ್ಸವಕ್ಕೆ ಬಾರದೇ ತೆರಳಿದರು.

ENGLISH SUMMARY…

CM Bommai to launch Kittur Utsav today
Belagavi, October 23, 2021 (www.justkannada.in): The Kittur Rani Chennamma Mahotsav celebrated in Belagavi every year is celebrating its silver jubilee today. Chief Minister Basavaraj Bommai will inaugurate the program today at 7.00 pm.
There is disbelief among the people that if the Chief Minister attends this Utsav he will lose his power. However, Basavaraj Bommai has decided to take part in it in order to wipe out the disbelief.
Then Chief Minister of Karnataka J.H. Patel had inaugurated the Kittur Utsav in 1997. After that none of the CM’s have inaugurated it.
However in 2012 then Chief Minister Jagadish Shettar had participated in the valedictory of the Kittur Utsav. Though B.S. Yedyurappa had also participated in the Kittur Utsav, he had just garlanded the statue of Kittur Chennamma located on the highway and returned without participating in the main programs held in the evening.
Keywords: CM Bommai/ Kittur Utsav/ Belagavi/ inauguration today

Key words: belgavi-kittur utsav-cm-basavaraj bommai