ಬೆಂಗಳೂರು,ಅಕ್ಟೋಬರ್,23,2021(www.justkannada.in): 66ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ‘ಕನ್ನಡಕ್ಕಾಗಿ ನಾನು’ ವಿಶೇಷ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ. ಮಾತಾಡ್ ಮಾತಾಡ್ ಕನ್ನಡ ಎನ್ನುವ ಘೋಷ ವಾಕ್ಯದೊಂದಿಗೆ ನಡೆಯುವ ಈ ಕಾರ್ಯಕ್ರಮ ರಾಜಭವನದಲ್ಲಿ ನಡೆಯಲಿದೆ.
ಕನ್ನಡವನ್ನು ಬಳಸಿ, ಬೆಳೆಸಿ ಎನ್ನುವ ಆಶಯದೊಂದಿಗೆ ಆರಂಭವಾದ ಈ ಅಭಿಯಾನಕ್ಕೆ ಅಕ್ಟೋಬರ್ 24 ರ ಸಂಜೆ 6.30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಅವರು ಸ್ವತಃ ಕನ್ನಡದಲ್ಲಿ ಅಭಿಯಾನದ ಸಂದೇಶ ನೀಡುವುದರ ಮೂಲಕ ಚಾಲನೆ ನೀಡಲಿದ್ದಾರೆ.
ಮಂಗಳೂರಿನ ಆಳ್ವಾಸ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಭರತನಾಟ್ಯದಲ್ಲಿ ‘ ನವದುರ್ಗೆ’ ಹಾಗೂ ಯಕ್ಷಗಾನದಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಪ್ರಸಂಗ ಪ್ರಸ್ತುತ ಪಡಿಸಲಿದ್ದಾರೆ.ಬೆಂಗಳೂರಿನ ಮಂಜುಳಾ ಪರಮೇಶ್ವರ ಮತ್ತು ತಂಡದವರಿಂದ ಹಲವು ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿದೆ.
Key words: Governor- tomorrow – special campaign for Kannada-launch