ಮೈಸೂರು,ಜು,25,2019(www.justkannada.in): ವ್ಯಾಪಾರ ವಹಿವಾಟು ಮಾಡುವ ಸ್ಥಳದಲ್ಲಿ ನೋ ಪಾರ್ಕಿಂಗ್ ನಿಯಮ ಸಡಲಿಕೆ ಮಾಡುವಂತೆ ಸಂಚಾರಿ ಎಸಿಪಿ ಮೋಹನ್ ಅವರಿಗೆ ನಗರದ ಹಳೇ ಸಂತೆಪೇಟೆಯ ಅಂಗಡಿ ವರ್ತಕರು ಮನವಿ ಮಾಡಿದರು.
ಅಂಗಡಿ ಮಾಲೀಕರಿಗೆ ಪಾರ್ಕಿಂಗ್ ತೊಂದರೆ ಹಿನ್ನಲೆ. ಲೊಂಡಿಂಗ್ ಅನಲೊಂಡಿಂಗ್ ಲಾರಿಗಳಿಗೆ ಪೊಲೀಸರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಅಂಗಡಿ ವರ್ತಕರರು ಹಳೇ ಸಂತೆಪೇಟೆ ರಸ್ತೆಯಲ್ಲಿ ದಿಡೀರ್ ಅಂಗಡಿಗಳು ಬಂದ್ ಮಾಡಿದರು.
ಈ ವೇಳೇ ನೋಪಾರ್ಕಿಂಗ್ ವಾಹನಗಳಿಗೆ ಹೆಚ್ಚು ದಂಡ ವಿದಿಸುತ್ತಿರುವುದರಿಂದ ವ್ಯಾಪಾರಕ್ಕೆ ಅಡಚಣೆಯಾಗುತ್ತಿದೆ. ವ್ಯಾಪಾರ ವಹಿವಾಟು ನಡೆಯುವ ಸ್ಥಳದಲ್ಲಿ ನಿಯಮ ಸಡಿಲಿಕೆ ಮಾಡಬೇಕು ಎಂದು ಅಂಗಡಿಯ ವರ್ತಕರು ಸಂಚಾರಿ ಪೊಲೀಸರಿಗೆ ಶಾಂತಿಯುತವಾಗಿ ಮನವಿ ಸಲ್ಲಿಸಿದರು.
ವರ್ತಕರ ಮನವಿಗೆ ಸ್ಪಂದಿಸಿದ ಸಂಚಾರಿ ಎಸಿಪಿ ಮೋಹನ್, ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಲೋಡ್ ಅನ್ ಲೋಡ್ ವಾಹನಗಳಿಗೆ ಸಮಯ ನಿಗದಿ ಮಾಡವುದರ ಬಗ್ಗೆ ಚಿಂತಿಸುತ್ತೇನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರವಷ್ಟೇ ತೀರ್ಮಾನ ತೆಗೆದುಕೊಳ್ಳಲಾಗುವುದು ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ ಸಂಚಾರಿ ವ್ಯವಸ್ಥೆ ಮಾಡಲಾಗುವುದು ವರ್ತಕರು ಕೂಡ ನಿಯಮ ಪಾಲನೆ ಮಾಡಬೇಕಾಗುತ್ತದೆ ಎಂದು ಸೂಚಿಸಿದರು.
Key words: mysore-Traders- demanding -no parking- rules.