ವಿಜಯಪುರ,ಅಕ್ಟೋಬರ್,24,2021(www.justkannada.in): ಹಾನಗಲ್ ಮತ್ತು ಸಿಂದಗಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸುನಾಮಿ ಶುರುವಾಗಿದ್ದು ವಿಪಕ್ಷಗಳು ಧೂಳಿಪಟವಾಗಲಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಸಿಂದಗಿ ಕ್ಷೇತ್ರದ ಕನ್ನೋಳಿ ಗ್ರಾಮದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸೋಲಿನ ಹತಾಶೆಯಿಂದ ಸಿದ್ಧರಾಮಯ್ಯ ಏನೇನೋ ಮಾತನಾಡುತ್ತಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸುನಾಮಿ ಶುರುವಾಗಿದೆ. ಬಿಜೆಪಿ ಸುನಾಮಿಗೆ ವಿರೋಧ ಪಕ್ಷಗಳು ಥಂಡಾ ಹೊಡೆದಿದ್ದಾರೆ. ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಬಿಜೆಪಿ ಗೋಣಿ ಚೀಲದಲ್ಲಿ ಹಣ ತಂದು ಹಂಚುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ಸಿಗರೇ ಚೀಲದಲ್ಲಿ ಹಣ ತಂದು ಹಂಚುತ್ತಿದ್ದಾರೆ. ಭ್ರಷ್ಟಾಚಾರ ಮಾಡಿ ಹಣ ಹಂಚೋದು ಕಾಂಗ್ರೆಸ್ ನವರ ಸಂಸ್ಕೃತಿ. ನಾವು ಚುನಾವಣೆಯಲ್ಲಿ ಗೆದ್ಧರೆ ಹಣ ಬಲ ಎನ್ನುತ್ತಾರೆ. ಹಾಗಾದರೇ ಮಸ್ಕಿ ಕ್ಷೇತ್ರದಲ್ಲಿ ನೀವು ಹೇಗೆ ಗೆಲುವು ಸಾಧಿಸಿದ್ರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ಏನೂ ಕೆಲಸ ಮಾಡದ ಕಾರಣ ಹೇಳಲು ಏನೂ ವಿಷಯ ಇಲ್ಲದ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆದರೆ ಈ ಕಾಂಗ್ರೆಸ್ ಪಕ್ಷದವರು ಅಧಿಕಾರ ಸಿಕ್ಕಾಗ ಸ್ವಾರ್ಥ ರಾಜಕಾರ ಮಾಡಿದ್ದೇ ಹೆಚ್ಚು ಎಂದು ದೂರಿದರು.
Key words: BJP- tsunami – two -Assembly constituency-Opposition parties –CM- Basavaraja Bommai