ಮೈಸೂರು, ಅಕ್ಟೋಬರ್ 25, 2021 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದೆ.
ಮಳೆ ಆರ್ಭಟದಿಂದಾಗಿ ಪುರಾತನ ಪ್ರಸಿದ್ಧ ಪಂಚಗವಿಮಠ ಕಟ್ಟಡ ಕುಸಿತವಾಗಿದೆ. 200ವರ್ಷಗಳ ಇತಿಹಾಸವಿರುವ ಪಂಚಗವಿಮಠ ಶಿಥಿಲಾವಸ್ಥೆಯಲ್ಲಿತ್ತು.
ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಗೋಡೆ ಕುಸಿದಿದೆ. ಯಾವುದೇ ಪ್ರಾಣಾಯಾಮ ಸಂಭವಿಸಿಲ್ಲ. ವಾಗಿಲ್ಲ.
ಸುಮಾರು 20 ವಿದ್ಯಾರ್ಥಿಗಳು ವಾಸ್ತವ್ಯವಿದ್ದ ಮಠದಲ್ಲಿ ಭಾರಿ ಅನಾಹುತ ತಪ್ಪಿದೆ.
ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಸ್ತವ್ಯ ಅವಕಾಶ ಕಲ್ಪಿಸಲಾಗಿತ್ತು. ಸರಿಯಾದ ನಿರ್ವಹಣೆ ಕಟ್ಟಡ ಶಿಥಿಲಾವಸ್ಥೆ ತಲುಪಿತ್ತು.
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸುವಂತೆ ಸ್ಥಳೀಯರು ಮನವಿ ಮಾಡಿದ್ದು, ಪಂಚಗವಿಮಠದ ಪುನಶ್ಚೇತನಕ್ಕೆ ಆಗ್ರಹಿಸಿದ್ದಾರೆ.