ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ಚೀನಾದಲ್ಲಿ 107 ಕೋಟಿಗೂ ಹೆಚ್ಚು ಜನರಿಗೆ ಸಂಪೂರ್ಣ ಲಸಿಕೆ ಹಾಕಿದ್ದರೂ ಈಗ ಕೋವಿಡ್ ಸಾಂಕ್ರಾಮಿಕತೆ ಮತ್ತೆ ಉಲ್ಬಣಗೊಳ್ಳುತ್ತಿದೆ.
14 ಪ್ರಾಂತ್ಯಗಳಲ್ಲಿ ಮಹಾಮಾರಿ ಹರಡಿ ಕಳವಳ ಉಂಟು ಮಾಡಿದೆ. ಬಂದರುಗಳ ಪ್ರವೇಶದ ಮೇಲೆ ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಅಕ್ಟೋಬರ್ 17ರಿಂದ 29ರ ನಡುವೆ ಸುಮಾರು 377 ಪ್ರಕರಣಗಳು ಸ್ಥಳಿಯವಾಗಿ ಹರಡಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ಎಚ್ಸಿ) ಅಧಿಕಾರಿಗಳು ತಿಳಿಸಿದ್ದಾರೆ.
2020ರ ಆರಂಭದಲ್ಲೇ ಸಾಂಕ್ರಾಮಿಕತೆಗೆ ಚೀನಾ ಕಡಿವಾಣ ಹಾಕಿದ್ದರೂ ಆಗಾಗ ಸೋಂಕು ಸ್ಫೋಟಗೊಳ್ಳುತ್ತಲೇ ಇದ್ದು ಸರ್ಕಾರದ ತಲೆನೋವನ್ನು ಹೆಚ್ಚಿಸಿದೆ.