ಮೈಸೂರು,ನವೆಂಬರ್,2,2021(www.justkannada.in): ತುಂಬಿ ತುಳುಕುತ್ತಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಾಗಿನ ಸಮರ್ಪಣೆ ಮಾಡಿದರು.
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯಕ್ಕೆ ಸಂಪ್ರದಾಯ ಬದ್ದವಾಗಿ ವಿಶೇಷ ಪೂಜೆ ಸಲ್ಲಿಸಿ ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಸಮರ್ಪಿಸಿದರು. ಕೆ ಆರ್ ಎಸ್ ಜಲಾಶಯ ಇತ್ತೀಚೆಗೆ ಭರ್ತಿಯಾದ್ದರಿಂದ ಕಬಿನಿ ಜಲಾಶಯಕ್ಕೆ ತಡವಾಗಿ ಬಾಗಿನ ಸಮರ್ಪಣೆ ಮಾಡಲಾಯಿತು.
ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಸಚಿವರಾದ ಗೋವಿಂದ ಕಾರಜೋಳ, ಎಸ್ ಟಿ ಸೋಮಶೇಖರ್, ಶಾಸಕರಾದ ಅನಿಲ್ ಚಿಕ್ಕಮಾದು, ಎನ್ ಮಹೇಶ್ ಸೇರಿದಂತೆ ಸ್ಥಳೀಯ ಮುಖಂಡರು ಸಾಥ್ ನೀಡಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಜಲಾಶಯಗಳು ತುಂಬಿವೆ. ಜಲಾಶಯಗಳಿಗೆ ಬಾಗಿನ ಅರ್ಪಿಸುವುದು ಖುಷಿಯ ವಿಚಾರ. ನಮಗಿಂತ ರೈತರಿಗೆ ಖುಷಿಯಾದರೆ ನಮಗೆ ಸಂತೋಷ. ಈ ಹಿಂದೆ ಕೂಡ ನೀರಾವರಿ ಸಚಿವನಾಗಿ ಬಾಗಿನ ಅರ್ಪಿಸಿದ್ದೇನೆ. ಕಬಿನಿ ಜಲಾಶಯದ ಮುಂದೆ ಬೃಂದಾವನ ಮಾದರಿ ಮಾಡುವ ಪ್ರಸ್ತಾಪ ಹಿಂದಿನಿಂದಲು ಇದೆ. ಅದನ್ನೆಲ್ಲ ಪರಿಶೀಲನೆ ಮಾಡುತ್ತೇವೆ ಎಂದರು.
ಉಪಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಫಲಿತಾಂಶ ಬರಲು ಇನ್ನು ಸಮಯ ಇದೆ. ಹಾನಗಲ್ ನಲ್ಲಿ ಈ ರೀತಿಯ ಪೈಪೋಟಿ ನಿರೀಕ್ಷೆಯಲ್ಲಿದ್ದೆವು. ಯಾವಾಗಲೂ ಅಲ್ಲಿ ಪೈಪೋಟಿ ಇದ್ದೆ ಇರುತ್ತೆ. ಟಿಕೆಟ್ ವ್ಯತ್ಯಾಸದಿಂದ ಪೈಪೋಟಿಯಲ್ಲ. ಮೊದಲಿನಿಂದಲೂ ಆ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರ. ಇನ್ನು ಬಹಳ ಸುತ್ತುಗಳಿನ ಮತ ಎಣಿಕೆ ನಡೆಯಬೇಕಿದೆ. ನಮಗೆ ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಉಪಚುನಾವಣೆ ಫಲಿತಾಂಶದಿಂದ ರಾಜಕೀಯ ದೃವಿಕರಣವಾಗುವುದಿಲ್ಲ. ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆ ನೋಡಿಲ್ವ ಎಂದರು.
ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ವಿಚಾರ: ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ.
ನಟ ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಎಂಬ ಮಾಜಿಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಬಗ್ಗೆ ನಮಗೆ ಅಪಾರ ಗೌರವ ಇದೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ. ಸಿದ್ದರಾಮಯ್ಯ ತಮ್ಮ ಪ್ರಸ್ತಾಪ ಸಲ್ಲಿಸಲಿ. ಸರ್ಕಾರ ಸಮಯ ಸಂಧರ್ಭ ನೋಡಿಕೊಂಡು ನಮ್ಮ ಪ್ರಸ್ತಾಪ ಸಿದ್ದಪಡಿಸುತ್ತೇವೆ. ಎಲ್ಲದಕ್ಕು ಒಂದು ನಿಯಮ ಪಾಲನೆ ಇರುತ್ತೆ. ಅದರ ಅಡಿಯಲ್ಲಿ ನಾವು ಸಾಗುತ್ತೇವೆ. ಪುನೀತ್ ರಾಜ್ ಕುಮಾರ್ ಎಲ್ಲಾ ಗೌರವಕ್ಕೂ ಅರ್ಹರು. ಅವರಿಗೆ ಇಂತಹ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ. ನಿಯಮಗಳನ್ನು ಪರಿಶೀಲನೆ ಮಾಡಬೇಕು ಎಂದರು.
Key words: overflowing-Kabini Reservoir-bagina- CM basavaraja Bommai
ENGLISH SUMMARY…
CM Bommai offers ‘Bagina’ to the brimming Kabini Reservoir
Mysuru, November 2, 2021 (www.justkannada.in): Chief Minister Basavaraj Bommai today offered ‘Bagina’ to the brimming Kabini Reservoir.
The Chief Minister offered ‘Bagina’ and performed puja as per the tradition, at the Kabini reservoir, located near the Beechanahalli Village, in H.D. Kote Taluk, Mysuru District. Offering ‘Bagina’ to the Kabini reservoir was delayed this year, as the KRS reached its maximum level lately.
The Chief Minister was accompanied by his cabinet colleagues Govind Karajola, S.T. Somashekar, MLAs Anil Chikkamadu, N. Mahesh, and others.
Speaking to the media persons later, he informed that almost all the reservoirs in the State have reached their maximum level. “It is indeed happy to offer ‘Bagina’ to the reservoirs. More than us, farmers should feel happy. Earlier also I had offered ‘Bagina’ as an Irrigation Minister. The proposal of building a garden in front of the Kabini Reservoir online with Brindavan garden is pending. I will check it,” he informed.
In his response to the reporters’ question on opposition leader Siddaramaiah’s tweet recommending the name of the late actor Puneeth Rajkumar for the prestigious ‘Padmashri’ award, the Chief Minister informed that he has a lot of respect for the late actor and informed that he would check it. “Let Siddaramaiah submit a proposal. The government will also prepare a proposal and recommend it to the Union Government. But a time should come, and there are rules and regulations to be followed. We will follow it accordingly. I agree Puneeth Rajkumar deserves more than that. All of us agree to it,” he added.
Keywords: Chief Minister Basavaraj Bommai/ Bagina/ Kabini Reservoir