ಮೈಸೂರು, ನವೆಂಬರ್ 09, 2021 (www.justkannada.in): ಮೈಸೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ರೈತರು ಕಂಗೆಟ್ಟಿದ್ದಾರೆ.
ಸರಗೂರು ತಾಲೂಕಿನ ಮನುಗನಹಳ್ಳಿ,ಹುಣಸಹಳ್ಳಿ ಗ್ರಾಮದ ರೈತರಿಗರ ಕಾಡಾನ ಉಪಟಳ ಹೆಚ್ಚಾಗಿದೆ. ಕಳೆದ 15 ದಿನಗಳಿಂದ ಹೆಚ್ಚಾದ ಹಾವಳಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ರೈತರ ಫಸಲು ನಾಶ ಮಾಡುತ್ತಿರುವ ಕಾಡಾನೆಗಳು. ಮನಗನಹಳ್ಳಿ ಗ್ರಾಮದಲ್ಲಿ ಬಾಳೆ ಬೆಳೆ ನಾಶ ಪಡಿಸಿವೆ. ಒಂದೆಡೆ ನಿರಂತರ ಮಳೆ ಮತ್ತೊಂಡೆ ಕಾಡನೆ ಉಪಟಳದಿಂದ ರೈತರು ದಿಕ್ಕೆಟ್ಟಿದ್ದಾರೆ.
ಆನೆ ಹಾವಳಿ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಗೆ ರೈತರ ಹಿಡಿಶಾಪ ಹಾಕುತ್ತಿದ್ದು, ಶೀಘ್ರವಾಗಿ ಆನೆ ಹಾವಳಿ ತಡೆಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.