ಪ್ರಧಾನಿ ಮೋದಿ ಭೇಟಿ ಮಾಡಿ ಚರ್ಚಿಸಿದ ವಿಚಾರಗಳ ಬಗ್ಗೆ ಮಾಹಿತಿ  ನೀಡಿದ ಸಿಎಂ ಬಸವರಾಜ ಬೊಮ್ಮಾಯಿ.

ನವದೆಹಲಿ,ನವೆಂಬರ್,11,2021(www.justkannada.in):  ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಭೇಟಿ ಬಹಳ ಒಳ್ಳೆ ರೀತಿಯಲ್ಲಿ ಆಗಿದೆ. ಮೋದಿ ಜೊತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಸುಮಾರು 40 ನಿಮಿಷಗಳ ಕಾಲ ಚರ್ಚಿಸಿದರು. ಬಳಿಕ ಮಾಧ್ಯಗಳ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ. ನಾವು 100 ದಿನದಲ್ಲಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ  ಪ್ರಧಾನಿ ಮೋದಿ ಅವರ ಜತೆ ಚರ್ಚೆ ನಡೆಸಿದೆ. ಇದೇ ವೇಳೆ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬರಲು ಆಹ್ವಾನಿಸಿದ್ದೇನೆ. 4 ಕಾರ್ಯಕ್ರಮಗಳಿಗೆ ಬರಲು ಆಹ್ವಾನಿಸಿದೆ. 2 ಕಾರ್ಯಕ್ರಮ ಮಾಡಿ ಬರುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರು.

ಇನ್ನು ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಬಿಟ್ ​ಕಾಯಿನ್​ ಬಗ್ಗೆ ಪ್ರಧಾನಿ ಮೋದಿ ಜತೆ ಯಾವುದೇ ಚರ್ಚೆಯಾಗಿಲ್ಲ, ಬಿಟ್ ಕಾಯಿನ್ ಬಗ್ಗೆ ನಾನೇ ಪ್ರಸ್ತಾಪಿಸಲು ಯತ್ನಿಸಿದಾಗ ಮೋದಿಯವರು ತಡೆದರು, ಇದೆಲ್ಲವೂ ಸಹಜ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದಿದ್ದಾರೆ. 100 ದಿನಗಳಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ಶ್ಲಾಘಿಸಿದ್ದಾರೆ.  ದಿಟ್ಟತನದಿಂದಲೇ  ಕೆಲಸ ಮುಂದುವರೆಸಲು ಸೂಚಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: CM- Basavaraj bommai-meet-PM Modi- information – issues -discussed.

ENGLISH SUMMARY…

CM Basavaraj Bommai shares information about the points discussed with PM Modi
New Delhi, November 11, 2021 (www.justkannada.in): Chief Minister Basavaraj Bommai, who is in New Delhi, has shared information about the various development and other issues that he discussed with Prime Minister Narendra Modi.
He met Prime Minister Modi and discussed for 40 minutes. Speaking with the press persons later the Chief Minister Bommai informed he discussed the various developmental programs that have been carried out in the last 100 days. “I also invited him to visit Bengaluru in December to take part in 4 different programs. However, he asked me to cut it short to two programs and assured me that he would visit,” he said.
He also informed that he didn’t discuss the Bitcoin issue making rounds in the State.
Keywords: Prime Minister Narendra Modi/ Chief Minister Basavaraj Bommai/ New Delhi/ discussion