ಬೆಂಗಳೂರು,ನವೆಂಬರ್,11,2021(www.justkannada.in): ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ದಂಧೆ ವಿಚಾರ ಸಾಕಷ್ಟು ಸದ್ಧು ಮಾಡುತ್ತಿದ್ದು ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ವಾದ ವಾಗ್ವಾದಗಳು ನಡೆಯುತ್ತಿವೆ.
ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, 2018ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕೃಷ್ಣ ಸಿಕ್ಕಿ ಹಾಕಿಕೊಂಡಿದ್ದ. ಕಾಂಗ್ರೆಸ್ ಮಾಜಿ ಶಾಸಕನ ಮಕ್ಕಳ ಜೊತೆಗೆ ಶ್ರೀಕಿ ಭಾಗಿಯಾಗಿದ್ದ. ಶ್ರೀಕಿಯನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿ ಏಕೆ ಬಂಧನ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
2018ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಶಾಸಕನ ಮಕ್ಕಳ ಜೊತೆಗೆ ಶ್ರೀಕೃಷ್ಣ ಸಿಕ್ಕಿ ಹಾಕಿಕೊಂಡಿದ್ದ. ಶ್ರೀಕಿಯನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿ ಏಕೆ ಬಂಧನ ಮಾಡಿಲ್ಲ. ಅವರ ಸರ್ಕಾರ ಇದ್ದಾಗ ಶ್ರೀಕೃಷ್ಣನನ್ನ ಬಂಧನ ಮಾಡಿಲ್ಲ ಏಕೆ? ನಮ್ಮ ಸರ್ಕಾರ ಬಂದಾಗ ಶ್ರೀಕೃಷ್ಣನನ್ನ ಬಂಧನ ಮಾಡಲಾಗಿತ್ತು. ಹಣ್ಣು ತಿಂದಿದ್ದು ಅವರೇ, ಮೂತಿ ಮುಸುರೆ ಅವರೇ ಮಾಡಿಕೊಂಡಿದ್ದು ಎಂದು ಟಾಂಗ್ ನೀಡಿದರು.
ಯುಬಿ ಸಿಟಿ ಗಲಾಟೆ ವೇಳೆ ಕಾಂಗ್ರೆಸ್ ನಾಯಕರ ಮಕ್ಕಳ ಜತೆ ಇದ್ದ. ಅಂದು ಅವರ ಮಕ್ಕಳು ಏಕೆ ಇದ್ರು ಅಂತ ಜನರ ಬಳಿ ಹೇಳಲಿ. ಈಗ ಅವರ ಬಳಿ ಏನೋ ಇದೆ ಅಂತ ಹೇಳುತ್ತಿದ್ದಾರೆ. ಬುಟ್ಟಿಯಲ್ಲಿ ಹಾವಿದೆ ಬಿಡ್ತೀನಿ ಅಂತಾ ಯಾರಿಗೆ ಹೆದರಿಸುತ್ತಿದ್ದಾರೆ? ಅವರು ಹಾವು ಬಿಡಲಿ, ಎಷ್ಟು ದೊಡ್ಡದು, ಯಾರಿಗೆ ಕಚ್ಚುತ್ತದೆ, ಯಾರು ಸಾಯ್ತಾರೆ ನೋಡೋಣ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
Key words: Bit Coin – Home Minister-Arag Jaganendra –Tong-congress