ಬೆಂಗಳೂರು,ನವೆಂಬರ್,20,2021(www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ಮುಂದುವರೆಸಿದ್ದಾರೆ.
ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್, ಎಸಿಬಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಈ ಹಿಂದೆ ಅಕ್ರಮಗಳ ಬಗ್ಗೆ ಎಸ್ ಐಟಿ ತನಿಖೆಯಲ್ಲಿ ಪ್ರಸ್ತಾಪಿಸಿದ್ಧೆ. ನಿನ್ನೆ ದಾಳಿ ವೇಳೆ ನಗದು ಸಿಕ್ಕಿರುವ ಬಗ್ಗೆ ಮಾಹಿತಿ ಇಲ್ಲ.ಎಸಿಬಿ ತನಿಖೆ ಬಳಿಕ ಅಗತ್ಯವಿದ್ಧರೆ ಹೆಚ್ಚಿನ ತನಿಖೆಗೆ ಸೂಚಿಸಲಾಗುತ್ತದೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆ ಎಂದರು.
ಬಿಡಿಎ ಒಂದು ಕಾಲದಲ್ಲಿ ಜನಪರ, ಉತ್ತಮ ಸಂಸ್ಥೆ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರದ ಆರೋಪಗಳು ಕೇಳಿ ಬರುತ್ತಿವೆ. ನಾನು ಅಧ್ಯಕ್ಷನಾಗಿ ಒಂದು ವರ್ಷ ಆಗಿದೆ. ಸ್ವಚ್ಛ ಬಿಡಿಎ ಮಾಡುವುದು ನನ್ನ ಗುರಿಯಾಗಿತ್ತು. ನಾನು ಬಂದಾಗ ಭ್ರಷ್ಟಾಚಾರ ಮಾಡಿ ಸಿಕ್ಕಿ ಹಾಕಿಕೊಂಡವರ ವಿರುದ್ಧ ಕ್ರಮ ತೆಗೆದುಕೊಂಡೆವು. ಇದು ಸಾರ್ವಜನಿಕರ ಹಣಕಾಸು ವ್ಯವಹಾರ ನಡೆಸುವ ಸಂಸ್ಥೆ. ನಿನ್ನೆಯ ದಾಳಿಗೆ ಸಾಕಷ್ಟು ದೂರುಗಳು ಕೊಡಲಾಗಿತ್ತು. ನಾನೂ ಸಹ ಎಸಿಬಿ ಅಧಿಕಾರಿಗಳಿಗೆ ಕೆಲವು ದಾಖಲೆ ಕೊಡೋದಾಗಿ ಹೇಳಿದ್ದೇನೆ ಎಂದು ಎಸ್.ಆರ್ ವಿಶ್ವನಾಥ್ ತಿಳಿಸಿದರು.
Key words: ACB -attack –BDA-SR Vishwanath – cooperate – investigation.