ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಮಳೆಹಾನಿ ವಿವರ ಪಡೆದ ಪ್ರಧಾನಿ ಮೋದಿ.

ಬೆಂಗಳೂರು,ನವೆಂಬರ್,23,2021(www.justkannada.in): ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಮಳೆಹಾನಿ ವಿವರ ಪಡೆದಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿದ್ದ ಪ್ರಧಾನಿ ಮೋದಿ ಮಳೆ ಹಾನಿ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಪರಿಹಾರ ಸೇರಿ ಎಲ್ಲಾ ರೀತಿಯ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ ಕರೆ ಮಾಡಿ ಮಳೆ ಹಾನಿ ಬಗ್ಗೆ ಮಾಹಿತಿ ಪಡೆದಿದ್ದಾರೆ.  ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು.   ಹಲವು ದಿನಗಳಿಂದ ರಾಜ್ಯದಲ್ಲಿ ಬಿಟ್ಟುಬಿಡದೇ ಸುರಿದ ಮಳೆರಾಯ ಅವಾಂತರವನ್ನ ಸೃಷ್ಠಿಸಿದ್ದು ಸದ್ಯ ಈಗ ಮಳೆಯ ಅಬ್ಬರ ತಗ್ಗಿದೆ.

Key words: PM-Modi-CM- Basavaraj bommai- calls- rains- Rain

ENGLISH SUMMARY…

PM Modi calls up CM Bommai and gets detail of loss incurred in the State due to rains
Bengaluru, November 23, 2021 (www.justkannada.in): The state has incurred a lot of loss due to the heavy rains that lashed from the last 10-15 days continuously. Prime Minister Narendra Modi has called up Chief Minister Basavaraj Bommai to get the details of the loss incurred in the State due to rains.
The Chief Minister is said to have discussed with the Prime Minister regarding the loss due to incessant rains. It is learnt that the Prime Minister has instructed the Chief Minister to undertake all necessary measures and also assured of providing the required support from the Center.
Keywords: Chief Minister/ Basavaraj Bommai/ Prime Minister/ Narendra Modi/ rains/ loss