ಬೆಂಗಳೂರು, ನವೆಂಬರ್ 24, 2021 (www.justkannada.in): ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಎಸ್. ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಕ್ಷಾ ಜೊತೆ ಪಂಕಜ್ ನಾರಾಯಣ್ ವಿವಾಹ ನೆರವೇರಿದ್ದು, ಮದುವೆ ಸಮಾರಂಭದಲ್ಲಿ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಕೆಲವು ಗಣ್ಯರು ಪಾಳ್ಗೊಂಡು ಆಶೀರ್ವಾದ ಮಾಡಿದ್ದಾರೆ.
ಕೆಲವೇ ದಿನಗಳ ಹಿಂದೆ ರಕ್ಷಾ ಜೊತೆ ಪಂಕಜ್ ಅವರ ನಿಶ್ಚಿತಾರ್ಥ ನೆರವೇರಿತ್ತು. ಈಗ ಮೈಸೂರಿನಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ.
ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದ್ದು, ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಕೆಲವು ಗಣ್ಯರು ನವ ದಂಪತಿಗೆ ಆಶೀರ್ವಾದ ಮಾಡಿದ್ದಾರೆ.