ಮೈಸೂರು.ನವೆಂಬರ್,24,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ಶೈಕ್ಷಣಿಕ ವಿಡಿಯೊ ಸ್ಪರ್ಧೆ ವಿಜೇತ ಚಿತ್ರಗಳ ಪ್ರದರ್ಶನ, ಪ್ರಕೃತಿ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವಕ್ಕೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಚಾಲನೆ ನೀಡಿದರು.
ವಿಶ್ವವಿದ್ಯಾಲಯದ ಧನಸಹಾಯ ಆಯೋಗ ನವದೆಹಲಿ ಹಾಗೂ ಶೈಕ್ಷಣಿಕ ಸಂವಹನ ಒಕ್ಕೂಟ ನವದೆಹಲಿ, ಶೈಕ್ಷಣಿಕ ಮಾಧ್ಯಮ ಸಂಶೋಧನಾ ಕೇಂದ್ರ ಇವರ ಸಹಯೋಗದಲ್ಲಿ ಪ್ರಕೃತಿ ಅಂತರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ ಉದ್ಘಾಟನಾ ಸಮಾರಂಭ ಮತ್ತು 23ನೇ ಯುಜಿಸಿ-ಸಿಐಸಿ ಶೈಕ್ಷಣಿಕ ವಿಡಿಯೋ ಸ್ಪರ್ಧೆಗಳ ಪ್ರದರ್ಶನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಆಶಯ ಭಾಷಣ ಮಾಡಿದರು. ಶೈಕ್ಷಣಿಕ ಸಂವಹನ ಒಕ್ಕೂಟದ ನಿರ್ದೇಶಕ ಪ್ರೊ.ಜಗತ್ ಭೂಷಣ್ ನಡ್ಡ ಚಿತ್ರೋತ್ಸವದ ಕಿರುಪರಿಚಯ ಮಾಡಿದರು.
1998 ರಿಂದ ಸಿಇಸಿ ಶೈಕ್ಷಣಿಕ ವಿಡಿಯೋ ಸ್ಪರ್ಧೆಗಳನ್ನು ನಡೆಸುತ್ತಾ ಬಂದಿದ್ದು, ಶೈಕ್ಷಣಿಕ ವಿಡಿಯೋ ನಿರ್ಮಾಣವನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ. ಶೈಕ್ಷಣಿಕ ಮಾಧ್ಯಮ ಸಂಶೋಧನಾ ಕೇಂದ್ರಗಳ ಮೂಲಕ ಸಿಇಸಿ ಈ ನಿರ್ಮಾಣಗಳನ್ನು ತಲುಪಲು ಪ್ರಯತ್ನಿಸುತ್ತಿದೆ. ಶೈಕ್ಷಣಿಕ ದ್ರವ್ಯದ ಗುಣಮಟ್ಟವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಚಿತ್ರತಯಾರಿಕರನ್ನು ಪ್ರೋತ್ಸಾಹಿಸಲು ಪ್ರಕೃತಿ ಅಂತರರಾಷ್ಟ್ರೀಯ ಸಾಕ್ಷ್ಯ ಚಿತ್ರಗಳ ಉತ್ಸವವನ್ನು ಸಿಐಸಿ ಆಯೋಜಿಸುತ್ತಾ ಬಂದಿದೆ. ಪರಿಸರ, ಅಭಿವೃದ್ಧಿ, ಮಾನವ ಹಕ್ಕುಗಳ ಹಾಗೂ ಸ್ವಚ್ಛ ಭಾರತ ಮುಂತಾದ ವಿಷಯಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ವಿಡಿಯೋ ಸ್ಪರ್ಧೆಯಲ್ಲಿ 12 ಸಾಕ್ಷ್ಯ ಚಿತ್ರಗಳನ್ನು, 17 ಸಾಕ್ಷ ಚಿತ್ರಗಳನ್ನು ಪ್ರದರ್ಶಿಸಲಾಗುವುದು.
ವಿಡಿಯೋ ಸ್ಪರ್ಧೆ ವಿವಿಧ ವರ್ಗಗಳಿಗೆ ಸೀಮಿತವಾಗಿದ್ದು 25,000ದಿಂದ ಒಂದು ಲಕ್ಷದವರೆಗೆ ನಗದು ಬಹುಮಾನ ಗಳಿಸಿದೆ ವಿಜೇತ ಸಾಕ್ಷ್ಯ ಚಿತ್ರಗಳಿಗೆ ವಿಶೇಷ ಪ್ರದರ್ಶನ, ಪ್ರಮಾಣ ಪತ್ರ, ಮತ್ತು ಟೋಫಿಯ ಜೊತೆ 50,000ರೂ. ಗಳ ಬಹುಮಾನವನ್ನು ಘೋಷಿಸಲಾಗಿದೆ.
Key words: Kerala Governor -Arif Mohammed Khan, – International -Documentary -Film -Festival – Mysore university