ಬೆಂಗಳೂರು,ನವೆಂಬರ್,25,2021(www.justkannada.in): ಮಳೆಯಿಂದಾಗಿ ಉಂಟಾಗಿರುವ ನಷ್ಟದ ಬಗ್ಗೆ ಅಂದಾಜು ಮಾಡಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ 10 ದಿನಗಳಲ್ಲಿ ರೈತರ ಖಾತೆಗೆ ನೇರವಾಗಿ ಪರಿಹಾರ ಹಾಕಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದರು.
ಈ ಕುರಿತು ಇಂದು ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಧಾರಾಕಾರ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿದೆ. 5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. 1ಲಕ್ಷ ಹೆಕ್ಟೇರ್ ವಾಣಿಜ್ಯ ಬೆಳೆ ಹಾನಿಯಾಗಿದೆ. ತಕ್ಷಣವೇ ಬೆಳೆ ಹಾನಿ ಅಂದಾಜು ಮಾಡಿ ನವೆಂಬರ್ 31 ರೊಳಗೆ ವರದಿ ನೀಡುವಂತೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ 10 ದಿನಗಳಲ್ಲಿ ರೈತರ ಖಾತೆಗೆ ನೇರ ಪರಿಹಾರ ಹಾಕುತ್ತೇವೆ ಎಂದರು.
ಮಳೆಯಿಂದ ಮನೆಗೆ ಹಾನಿಯಾಗಿದ್ದರೆ 24 ಗಂಟೆಯೊಳಗೆ ಪರಿಹಾರ ನೀಡುವಂತೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಮತ್ತೆ ಚಂಡಮಾರುತ ಭೀತಿಯಿದ್ದು ಮೂರು ದಿನಗಳ ಎಚ್ಚರಿಕೆಯಿಂದ ಇರುವಂತೆ ಡಿಸಿಗಳಿಗೆ ಸೂಚಿಸಿರುವುದಾಗಿ ಸಚಿವ ಆರ್.ಅಶೋಕ್ ಹೇಳಿದರು.
Key words: Rain-crop- Loss – Farmers-‘ Accounts -10 Days-Minister -R. Ashok.