ಬೆಂಗಳೂರು, ನವೆಂಬರ್ 30, 2021 (www.justkannada.in): ಕೊರೊನಾ 3ನೇ ಅಲೆಯ ಭೀತಿ ಶುರುವಾಗಿದೆ. ಇದರ ಜೊತೆಗೆ ವಿಶ್ವದ 14 ದೇಶಗಳಲ್ಲಿ ಒಮಿಕ್ರಾನ್ ವೈರಸ್ ಆತಂಕ ಜನ ಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ.
ಇಷ್ಟು ದಿನ ನೆಮ್ಮದಿಯಾಗಿ ಶಾಲಾ-ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಂತ ಪೋಷಕರಲ್ಲಿ ಈಗ ಕೊರೋನಾ 3ನೇ ಅಲೆಯ ಭೀತಿ ಕಾಡುತ್ತಿದೆ.
ಇದರಿಂದಾಗಿಯೇ ಪೋಷಕರು ಈಗ ಮಕ್ಕಳನ್ನು ಶಾಲೆಗೆ ಕಳಿಸೋದಕ್ಕೆ ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೆ ಶಾಲೆಗಳು ಆರಂಭಗೊಂಡ ನಂತ್ರ ನಿರಾತಂಕವಾಗಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಿದ್ದಂತ ಪೋಷಕರಲ್ಲಿ, ಈಗ ಭಯ ಆವರಿಸುವಂತಾಗಿದೆ.
ಚಳಿಗಾಲದ ಈ ಸಮಯದಲ್ಲಿ ವೈರಲ್ ಫೀವರ್ ಕೂಡ ಮಕ್ಕಳನ್ನು ಕಾಡುತ್ತಿರೋದ್ರಿಂದಾಗಿ, ಸ್ವಲ್ಪ ಚಳಿ, ಜ್ವರ ಮಕ್ಕಳಲ್ಲಿ ಕಾಣಿಸಿಕೊಂಡ್ರೆ ಸಾಕು, ಕೊರೋನಾ ಆಂತಕ ಹುಟ್ಟಿಸುತ್ತಿದೆ.