ಬೆಂಗಳೂರು,ಡಿಸೆಂಬರ್,1,2021(www.justkannada.in): ರಾಜ್ಯದಲ್ಲಿ ಒಮಿಕ್ರಾನ್ ಭೀತಿ ಹಿನ್ನೆಲೆ ಅಗತ್ಯವಿದ್ರೆ ಕಠಿಣ ಕ್ರಮಕ್ಕೂ ಸಿದ್ಧ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ಧಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಒಮಿಕ್ರಾನ್ ಭೀತಿ ಹಿನ್ನೆಲೆ ಸಿಎಂ ಕೇಂಧ್ರ ಆರೋಗ್ಯ ಸಚಿವರನ್ನ ಭೇಟಿಯಾಗಲಿದ್ದಾರೆ. ವೈದ್ಯ ಸಿಬ್ಬಂದಿ ಲಸಿಕೆ ಪಡೆದು ಬಹಳ ದಿನವಾಗಿದೆ. ಕೆಲವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ. ಹೀಗಾಗಿ ಆರೋಗ್ಯ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲು ಚಿಂತನೆ ನಡೆಸಲಾಗಿದೆ. ಆದ್ಯತೆ ಮೇರೆಗೆ ಬೂಸ್ಟ್ ಡೋಸ್ ನೀಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸಿಎಂ ಜತೆ ಚರ್ಚಿಸಿದ್ದೇನೆ ಎಂದರು.
ಒಮಿಕ್ರಾನ್ ಡೆಲ್ಟಾ ಗಿಂತ ಡೇಂಜರ್. ಅಗತ್ಯವಿದ್ರೆ ಕಠಿಣ ಕ್ರಮಕ್ಕೂ ಸಿದ್ಧವಿದ್ದೇವೆ. ಆದರೆ ಅಂಥ ಪರಿಸ್ಥಿತಿ ಬರದಂತೆ ನೋಡಿಕೊಳ್ಳುತ್ತೇವೆ ಒಮಿಕ್ರಾನ್ ಮಣಿಸುವವರೆಗೂ ಎಚ್ಚರದಿಂದಿರಬೇಕು. ಸರ್ಕಾರವೇ ಎಲ್ಲವನ್ನೂ ಮಾಡಲು ಆಗಲ್ಲ ಸರ್ಕಾರದ ಜತೆ ಜನ ಕೈಜೋಡಿಸಬೇಕು. ನಮ್ಮಲ್ಲಿ ಲಸಿಕೆ ಕೊರತೆ ಇಲ್ಲ. ಲಸಿಕೆ ಹಾಕಿಸಿಕೊಳ್ಳದವರು ಹಾಕಿಸಿಕೊಳ್ಳಿ ಎಂದು ಸುಧಾಕರ್ ಮನವಿ ಮಾಡಿದರು.
Key words: Omicron-panic-Ready -tough action-Health Minister- Dr. K. Sudhakar.
ENGLISH SUMMARY…
Omicron virus scare: We will take stringent measures if required – Health Minister Dr. K. Sudhakar
Bengaluru, December 1, 2021 (www.justkannada.in): “If we have to take stringent measures in the background of the fear of the Omicron virus, we won’t hesitate to take it,” opined Health and Medical Education Minister Dr. K. Sudhakar.
Speaking to the media persons in Bengaluru today, he informed that he is visiting the Union Health Minister to discuss the Omicron virus fear. “It is a long time since the medical fraternity has taken the vaccination. A few of them have lesser immunity. Hence, plans are made to provide a booster dose for the health staff on a preference basis. I have discussed this with the Chief Minister,” he informed.
“The Omicron virus is dangerous than Delta. If required, we will take stringent measures. However, we ensure to take all precautionary measures to prevent such a situation. Everyone should be careful the government alone cannot do everything. The people should join hands with the government. There is no shortage of vaccines in the State. I request all those who still haven’t taken the vaccination to get it first,” he added.
Keywords: Health Minister/ Dr. K.Sudhakar/ Omicron virus/ fear/ stringent measures