ಒಮಿಕ್ರಾನ್ ಬಗ್ಗೆ ಆತಂಕ ಬೇಡ: ಹೊಸ ವರ್ಷಾಚರಣೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು, ಡಿಸೆಂಬರ್,8,2021(www.justkannada.in):   ಒಮಿಕ್ರಾನ್ ಬಗ್ಗೆ ಯಾರಿಗೂ ಆತಂಕ ಬೇಡ. ಹೊಸ ವರ್ಷಾಚರಣೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೋವಿಡ್ ಒಮಿಕ್ರಾನ್ ಭೀತಿ ಹಿನ್ನೆಲೆ ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಒಮಿಕ್ರಾನ್ ಬಗ್ಗೆ ಯಾವುದೇ ಆತಂಕ ಬೇಡ. ಮಕ್ಕಳು ಪೋಷಕರು ಆತಂಕಪಡಬೇಕಿಲ್ಲ. ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.   ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದರು.

ನಾಳಿನ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಬಗ್ಗೆ ಚರ್ಚೆ ನಡೆಸುತ್ತೇವೆ. ಕೊರೊನಾ ನಿತಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳಬೇಕು ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Don’t-worry- about-Omicron:-CM-Basavaraja Bommai

ENGLISH SUMMARY…

No need to panic about Omicron: Haven’t yet decided about New Year celebrations – CM Bommai
Bengaluru, December 8, 2021 (www.justkannada.in): “There is no need for anybody to panic about Omicron. We are yet to decide about the new year celebrations. We will arrive at a decision observing the situation,” opined Chief Minister Basavaraj Bommai.
Speaking in Bengaluru today, he said that the parents don’t have to panic to send their wards to schools. “Precautionary measures should be taken in schools. Everybody, please take both doses of COVID vaccine,” he advised.
“We will discuss the COVID Pandemic in the cabinet meeting tomorrow. We will discuss what steps need to be taken to control the pandemic,” he added.
Keywords: Chief Minister/ Basavaraj Bommai/ COVID-19 Pandemic/ new year celebrations/ don’t panic